ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಶ್ಚಿಮ ಘಟ್ಟ ಸಂರಕ್ಷಣೆಗೆ 30 ಲಕ್ಷ ಡಾಲರ್ ಹೂಡಿಕೆ ಮಾಡಲಿರುವ ಅಮೆಜಾನ್

Published 4 ಸೆಪ್ಟೆಂಬರ್ 2023, 10:02 IST
Last Updated 4 ಸೆಪ್ಟೆಂಬರ್ 2023, 10:02 IST
ಅಕ್ಷರ ಗಾತ್ರ

ನವದೆಹಲಿ: ಪ್ರಕೃತಿ ಸಂಬಂಧ ಯೋಜನೆಗಳಲ್ಲಿ ಭಾರತದಲ್ಲಿ 30 ಲಕ್ಷ ಡಾಲರ್‌ ಹೂಡಿಕೆ ಮಾಡುವುದಾಗಿ ಇ–ಕಾಮರ್ಸ್‌ ದೈತ್ಯ ಅಮೆಜಾನ್‌ ಹೇಳಿದೆ.

ಏಷ್ಯಾ ಪೆಸಿಫಿಕ್‌ ವಲಯದಲ್ಲಿ ಪರಿಸರ ಸಂಬಂಧಿ ಯೋಜನೆಗಳಿಗಾಗಿ ಒಟ್ಟು 1.5 ಕೋಟಿ ಡಾಲರ್ ಹೂಡಿಕೆ ಮಾಡಲು ಅಮೆಜಾನ್‌ ಉದ್ದೇಶಿಸಿದ್ದು, ಇದರ ಭಾಗವಾಗಿ ಭಾರತದಲ್ಲೂ ಹೂಡಿಕೆ ಮಾಡುವುದಾಗಿ ಹೇಳಿದೆ.

ವನ್ಯಜೀವಿ ಅಧ್ಯಯನ ಕೇಂದ್ರದ (Centre for Wildlife Studies) ಸಹಯೋಗದೊಂದಿಗೆ ಪಶ್ಚಿಮ ಘಟ್ಟದಲ್ಲಿನ ಸಮುದಾಯಗಳನ್ನು ಮತ್ತು ಸಂರಕ್ಷಣಾ ಪ್ರಯತ್ನಗಳನ್ನು ಬೆಂಬಲಿಸಲು ಈ ಹೂಡಿಕೆ ಮಾಡಲಾಗುತ್ತಿದೆ. ಪಶ್ಚಿಮ ಘಟ್ಟವು ವಿಶ್ವದಲ್ಲೇ ಅತೀ ಹೆಚ್ಚು ಆನೆ ಹಾಗೂ ಹುಲಿಗಳ ಆವಾಸ ಸ್ಥಾನವಾಗಿದ್ದು, ದೇಶದ ಶೇ 30ಕ್ಕೂ ಅಧಿಕ ವನ್ಯಜೀವಿಗಳು ಇಲ್ಲಿವೆ ಎಂದು ಅಮೆಜಾನ್ ಪ್ರಕಟಣೆಯಲ್ಲಿ ತಿಳಿಸಿದೆ.

10 ಲಕ್ಷ ಡಾಲರ್ ವೆಚ್ಚದಲ್ಲಿ ‘ವೈಲ್ಡ್‌ ಕಾರ್ಬನ್’ ಯೋಜನೆ ಕೈಗೊಳ್ಳಲಿದೆ. ಇದರಲ್ಲಿ 10,000 ರೈತರಿಗೆ 10 ಲಕ್ಷ ಹಣ್ಣು ನೀಡುವ, ಮರಮಟ್ಟುಗಳಿಗೆ ಉಪಯೋಗವಾಗುವಂಥ ಮತ್ತು ಔಷಧೀಯ ಸಸಿಗಳ ನೆಡಲು ಹಾಗೂ ಪಾಲನೆ ಮಾಡಲು ಬೆಂಬಲ ನೀಡಲಾಗುತ್ತದೆ ಎಂದು ಅಮೆಜಾನ್ ಹೇಳಿದೆ.

ಏಷ್ಯಾ–ಪೆಸಿಫಿಕ್ ವಲಯದಲ್ಲಿ ದಟ್ಟ ಕಾಡು ಹಾಗೂ ಕರಾವಳಿ ಪ್ರದೇಶಗಳೂ ಇದ್ದರೂ, ಹವಾಮಾನ ಬದಲಾವಣೆ, ಜೀವವೈವಿಧ್ಯದ ನಷ್ಟ ಮತ್ತು ಮಣ್ಣಿನ ಸವಕಳಿಯಿಂದಾಗಿ ಹೆಚ್ಚು ದುರ್ಬಲವಾಗಿದೆ. ಹವಾಮಾನ ಬದಲಾವಣೆಯ ದುಷ್ಪರಿಣಾಮಗಳಿಂದ ರಕ್ಷಿಸಲು ಹಾಗೂ ಜೀವವೈವಿಧ್ಯಗಳನ್ನು ಕಾಪಾಡಲು, ಭಾರಿ ಹಾಗೂ ಸಣ್ಣ ಯೋಜನೆಗಳು ಬೇಕಾಗಿವೆ. ನಾವು ಎರಡಲ್ಲೂ ಹೂಡಿಕೆ ಮಾಡಲು ಬದ್ಧರಾಗಿದ್ದೇವೆ ಎಂದು ಅಮೆಜಾನ್‌ನ ಜಾಗತಿಕ ಸುಸ್ಥಿರ ಯೋಜನೆಯ ಉಪಾಧ್ಯಕ್ಷೆ ಕಾರಾ ಹಸ್ಟ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT