ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಆ್ಯಂಟ್‌ ಸಮೂಹದಿಂದ ಜಾಕ್ ಮಾ ಹೊರಕ್ಕೆ’

Last Updated 7 ಜನವರಿ 2023, 19:51 IST
ಅಕ್ಷರ ಗಾತ್ರ

ಬೀಜಿಂಗ್‌: ಜಾಕ್‌ ಮಾ ಅವರು ಆ್ಯಂಟ್ ಸಮೂಹದಿಂದ ಹೊರನಡೆಯಲಿದ್ದಾರೆ ಎಂದು ಕಂಪನಿಯು ಶನಿವಾರ ಹೇಳಿದೆ.

ಯಾವುದೇ ಷೇರುದಾರ, ಏಕಾಂಗಿಯಾಗಿ ಅಥವಾ ಇತರರೊಂದಿಗೆ ಜಂಟಿಯಾಗಿ ಆ್ಯಂಟ್‌ ಸಮೂಹದ ಮೇಲೆ ನಿಯಂತ್ರಣ ಹೊಂದದಂತೆ ಮಾಲೀಕತ್ವ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲಾಗುತ್ತಿದೆ ಎಂದು ಪ್ರಕಟಣೆ
ಯಲ್ಲಿ ತಿಳಿಸಿದೆ.

ಮಾಲೀಕತ್ವದ ಬಗ್ಗೆ ಕಂಪನಿಯ ಹಿಂದಿನ ಸಂಕೀರ್ಣವಾದ ವ್ಯವಸ್ಥೆಯಿಂದಾಗಿ ಜಾಕ್‌ ಮಾ ಅವರು ಪರೋಕ್ಷವಾಗಿ ಆ್ಯಂಟ್‌ನ ಶೇ 53.46ರಷ್ಟು ಷೇರುಗಳ ಮೇಲೆ ನಿಯಂತ್ರಣ ಹೊಂದಿದ್ದರು ಎಂದು ಅದು ಹೇಳಿದೆ.

ಸ್ಥಾಪಕರು, ನಿರ್ವಾಹಕರು ಮತ್ತು ಸಿಬ್ಬಂದಿ ಒಳಗೊಂಡು ಒಟ್ಟು 10 ಮಂದಿಗೆ ಸ್ವತಂತ್ರವಾಗಿ ಮತದಾನದ ಹಕ್ಕು ಇರಲಿದೆ. ಇದರಿಂದಾಗಿ ಮಾ ಅವರು ಶೇ 6.2ರಷ್ಟು ಮತದಾನದ ಹಕ್ಕು ಹೊಂದಲಿದ್ದಾರೆ ಎಂದು ಪ್ರಕಟಣೆ
ಯಲ್ಲಿ ತಿಳಿಸಲಾಗಿದೆ.

ಮಾ ಅವರು 2020ರ ಅಕ್ಟೋಬರ್‌
ನಲ್ಲಿ ಶಾಂಘೈನಲ್ಲಿ ನಡೆದಿದ್ದ ಕಾರ್ಯಕ್ರಮವೊಂದರಲ್ಲಿ ಚೀನಾದ ಹಣಕಾಸು ವ್ಯವಸ್ಥೆಯ ಬಗ್ಗೆ ಕಟು ವಿಮರ್ಶೆಯ ಮಾತುಗಳನ್ನು ಆಡಿದ್ದರು. ಮಾ ಅವರ ಆ್ಯಂಟ್ ಕಂಪನಿ ಷೇರುಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡುವ (ಐಪಿಒ) ಪ್ರಕ್ರಿಯೆಯನ್ನು ಚೀನಾದ ಅಧಿಕಾರಿಗಳು ರದ್ದು ಮಾಡಿದ್ದರು. ಇದು ಮಾ ಅವರ ಕಟು ಮಾತಿಗೆ ಸಿಕ್ಕ ಪ್ರತಿಕ್ರಿಯೆ ಎಂದು ಪರಿಗಣಿಸಲಾಗಿತ್ತು.

2020ರ ಅಕ್ಟೋಬರ್‌ 10ರ ನಂತರ ಸುಮಾರು ಎರಡು ತಿಂಗಳವರೆಗೆ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT