ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದಲ್ಲೇ ‘ಐಫೋನ್‌ 13’ ತಯಾರಿಕೆ

Last Updated 11 ಏಪ್ರಿಲ್ 2022, 10:50 IST
ಅಕ್ಷರ ಗಾತ್ರ

ನವದೆಹಲಿ: ಆ್ಯಪಲ್‌ ಕಂಪನಿಯು ಭಾರತದಲ್ಲಿ ಐಫೋನ್‌ 13 ಸ್ಮಾರ್ಟ್‌ಫೋನ್‌ ಅನ್ನು ಭಾರತದಲ್ಲಿಯೇ ತಯಾರು ಮಾಡಲು ಆರಂಭಿಸಿದೆ.

ಚೀನಾದ ಪೂರೈಕೆ ವ್ಯವಸ್ಥೆಯ ಮೇಲಿನ ಅವಲಂಬನೆಯನ್ನು ತಗ್ಗಿಸುವ ಪ್ರಯತ್ನದ ಭಾಗವಾಗಿ ಕಂಪನಿಯು ಈ ನಿರ್ಧಾರಕ್ಕೆ ಬಂದಿದೆ.

ದೇಶದಲ್ಲಿ ಆ್ಯಪಲ್‌ ಫೋನ್‌ಗಳನ್ನು ತಯಾರಿಸುತ್ತಿರುವ ತೈವಾನ್‌ ಮೂಲದ ಫಾಕ್ಸ್‌ಕಾನ್‌ ಕಂಪನಿಯು ತಮಿಳುನಾಡಿನ ಶ್ರೀಪೆರಂಬದೂರು ಘಟಕದಲ್ಲಿಯೇ ಐಫೋನ್‌ 13 ಸಹ ತಯಾರಾಗಲಿದೆ ಎಂದು ಮೂಲಗಳು ಹೇಳಿವೆ.

ಕಂಪನಿಯು ಭಾರತವನ್ನೂ ಒಳಗೊಂಡು ಇತರೆ ಮಾರುಕಟ್ಟೆಗಳಿಗೆ ತನ್ನ ಐಫೋನ್‌ ತಯಾರಿಕೆಯನ್ನು ಹಸ್ತಾಂತರಿಸುತ್ತಿದೆ. ಐಪ್ಯಾಡ್‌ ಟ್ಯಾಬ್ಲೆಟ್‌ಗಳನ್ನು ಸಹ ಭಾರತದಲ್ಲಿಯೇ ತಯಾರಿಸುವ ಆಲೋಚನೆಯನ್ನೂ ಹೊಂದಿದೆ.

ಕಂಪನಿಯು 2017ರಲ್ಲಿ ‘ಐಫೋನ್‌ ಎಸ್‌ಇ’ ಮೂಲಕ ಭಾರತದಲ್ಲಿ ತಯಾರಿಕೆ ಆರಂಭಿಸಿತು. ಆ ಬಳಿಕ ತಯಾರಾಗುತ್ತಿರುವ ನಾಲ್ಕನೇ ಮಾದರಿ ‘ಐಫೋನ್‌ 13’ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT