ಸೋಮವಾರ, 25 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಡರ್ ಮಾಡಿದ ಬಳಿಕ ಧಾನ್ಯ ಪುಡಿ ಮಾಡಿ ತಾಜಾ ಹಿಟ್ಟು ಪೂರೈಕೆ

Published 17 ಜುಲೈ 2023, 5:49 IST
Last Updated 17 ಜುಲೈ 2023, 5:49 IST
ಅಕ್ಷರ ಗಾತ್ರ

ಬೆಂಗಳೂರು: ಆಶೀರ್ವಾದ್ ಕಂಪನಿ ಇದೇ ಮೊದಲ ಬಾರಿಗೆ ಗ್ರಾಹಕರು ಬೇಡಿಕೆ ಸಲ್ಲಿಸಿದ ಎರಡು ದಿನಗಳೊಳಗೆ ಧಾನ್ಯ ಪುಡಿ ಮಾಡಿ ತಾಜಾ ಹಿಟ್ಟು ಪೂರೈಸಲುಮುಂದಾಗಿದೆ.

ಇದು ಹಿಟ್ಟಿನ ಗಿರಣಿಯಲ್ಲಿ ಹೋಗಿ ಧಾನ್ಯ ನೀಡಿ ಹಿಟ್ಟು ಮಾಡಿಸಿಕೊಂಡಂತೆ. ಆದರೆ ಇಲ್ಲಿ ಗ್ರಾಹಕರು ಆನ್‌ಲೈನ್‌ನಲ್ಲೇ ತಮಗೆ ಬೇಕಾದ ಹಿಟ್ಟನ್ನು ಆರ್ಡರ್ ಮಾಡಬಹುದು. ಬೇಡಿಕೆ ಬಂದ ಬಳಿಕ ಆ ಧಾನ್ಯವನ್ನು ಯಂತ್ರಕ್ಕೆ ಹಾಕಿಸಿ ಹಿಟ್ಟು ಮಾಡಿಸಿ, ಪೇಪರ್‌ ಪ್ಯಾಕೇಟ್‌ ಮೇಲೆ ನಮ್ಮ ಹೆಸರನ್ನು ಮುದ್ರಿಸಿ ಪಾರ್ಸಲ್‌ ಮಾಡಲಾಗುವುದು ಎಂದು ಐಟಿಸಿ ಕಂಪನಿಯ SBU ಸ್ಟೇಪಲ್ಸ್, ಸ್ನ್ಯಾಕ್ಸ್ ಮತ್ತು ಮಿಲ್ಸ್‌ನ ಗಣೇಶ್ ಸುಂದರರಾಮನ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೇವಲ 48 ಗಂಟೆಗಳ ಅವಧಿಯ ಒಳಗಾಗಿ ಹಿಟ್ಟು ಕಳುಹಿಸಲಾಗುತ್ತದೆ. ಇದರ ದರವೂ ಕೈಗೆಟುಕುವ ರೀತಿಯಲ್ಲಿಯೇ ಇದೆ ಎಂದು ಅವರು ವಿವರಣೆ ನೀಡಿದರು. ಆಶೀರ್ವಾದ್ ಚಕ್ಕಿ ಡಾಟ್ ಕಾಂ ತಾಣದಲ್ಲಿ ಗ್ರಾಹಕರು ಆರ್ಡರ್ ನೀಡಬಹುದಾಗಿದೆ.

ಸಾಮಾನ್ಯವಾಗಿ ಜನರಿಗೆ ಪ್ರತಿ ಪದಾರ್ಥಗಳಲ್ಲೂ ತಾಜಾ ಉತ್ಪನ್ನ ಪಡೆಯಬೇಕೆಂಬ ತವಕವಿರುತ್ತದೆ. ಇಂತವರಿಗಾಗಿಯೇ ಈ ರೀತಿ ತಾಜಾ ಹಿಟ್ಟನ್ನು ತಯಾರಿಸಲು ಕಂಪನಿಯು ಮುಂದಾಗಿದೆ. ಈವರೆಗೂ ಗೋಧಿ, ರಾಗಿ ಹಿಟ್ಟುಗಳನ್ನು ತಯಾರಿಸಿ ಅದರ ಪ್ಯಾಕೇಟ್‌ಗಳನ್ನು ಮಾರುಕಟ್ಟೆಗೆ ಬಿಡಲಾಗುತ್ತಿತ್ತು. ಇದೀಗ, ಆನ್‌ಲೈನ್‌ನಲ್ಲಿ ಜನರು ತಮಗೆ ಬೇಕಾದ ಹಿಟ್ಟನ್ನು ತಯಾರಿಸಿಕೊಡುವಂತೆ ಆರ್ಡರ್‌ ಮಾಡಿದ ಬಳಿಕವೇ, 48 ಗಂಟೆಗಳ ಅವಧಿಯಲ್ಲಿ ಮಷಿನ್‌ಗೆ ಹಾಕಿಸಿ, ಅದನ್ನು ಶುದ್ಧಗೊಳಿಸಿ ತಾಜಾ ಹಿಟ್ಟನ್ನು ಪೂರೈಸಲಾಗುತ್ತದೆ. ಪ್ರಸ್ತುತ ‘ನಮ್ಮ ಚಕ್ಕಿ’ ಹೆಸರಿನ ಈ ತಾಜಾ ಹಿಟ್ಟು ಪೂರೈಸುವ ಕ್ರಮದಲ್ಲಿ ಗೋಧಿ, ಅಕ್ಕಿ, ರಾಗಿ, ಕಡಲೆ ಸೇರಿದಂತೆ 12 ಬಗೆಯ ಹಿಟ್ಟುಗಳನ್ನು ಪೂರೈಸಲಾಗು್ತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT