‘ಎಫ್‌ಕೆಸಿಸಿಐ’ ಆಶ್ರಯದಲ್ಲಿ ‘ಆಸಿಯಾನ್‌’ ವಾಣಿಜ್ಯ ಸಂಸ್ಥೆಗಳ ಶೃಂಗಸಭೆ

6

‘ಎಫ್‌ಕೆಸಿಸಿಐ’ ಆಶ್ರಯದಲ್ಲಿ ‘ಆಸಿಯಾನ್‌’ ವಾಣಿಜ್ಯ ಸಂಸ್ಥೆಗಳ ಶೃಂಗಸಭೆ

Published:
Updated:
Deccan Herald

ಬೆಂಗಳೂರು: ವಾಣಿಜ್ಯ ಮತ್ತು ಉದ್ದಿಮೆದಾರರ ಸಂಬಂಧ ವೃದ್ಧಿಸುವ ಉದ್ದೇಶದಿಂದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆಯು (ಎಫ್‌ಕೆಸಿಸಿಐ) ಆಸಿಯಾನ್‌ ಶೃಂಗಸಭೆ ಆಯೋಜಿಸಲು ಉದ್ದೇಶಿಸಿದೆ.

‘ಮುಂದಿನ ವರ್ಷ ಜನವರಿ ಯಲ್ಲಿ ಬೆಂಗಳೂರಿನಲ್ಲಿ ನಡೆಯಲಿರುವ ಈ ಶೃಂಗಸಭೆಯಲ್ಲಿ ಆಸಿಯಾನ್‌ ರಾಷ್ಟ್ರಗಳ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಗಳು ಭಾಗವಹಿಸಲಿವೆ’ ಎಂದು ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ ಎಸ್‌. ಶೆಟ್ಟಿ  ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಎಫ್‌ಕೆಸಿಸಿಐ’ನ 2018–19ನೇ ಸಾಲಿನ ಮುನ್ನೋಟ ವಿವರಿಸಿದರು.

ಗ್ರೇಟರ್‌ ಬೆಂಗಳೂರು: ‘ಬೆಂಗಳೂರು ನಗರದ ಮೇಲಿನ  ಒತ್ತಡ ತಗ್ಗಿಸಲು ನಗರದ ಸುತ್ತ ಕನಿಷ್ಠ ನಾಲ್ಕು ಉಪನಗರಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಇದಕ್ಕೆ ಗ್ರೇಟರ್‌ ಬೆಂಗಳೂರು ಅಥವಾ ರಾಜ್ಯ ರಾಜಧಾನಿ ಪ್ರದೇಶ (ಎಸ್‌ಸಿಆರ್‌) ಎಂದು ಕರೆಯಬಹುದು’ ಎಂದು ಸಲಹೆ ನೀಡಿದರು.

‘ಕೈಗಾರಿಕೆಗಳಿಗೆ 99 ವರ್ಷಗಳ ಗುತ್ತಿಗೆ ಬದಲಿಗೆ 10 ವರ್ಷಗಳ ಭೋಗ್ಯ ಮತ್ತು ಮಾರಾಟ ಒಪ್ಪಂದದ ಅಡಿ ಭೂಮಿ ಮಂಜೂರು ಮಾಡಬೇಕು ಎಂದು ಕೈಗಾರಿಕೆ ಸಚಿವರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಅವರು ವಿವರಿಸಿದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !