ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಮಾನ ಇಂಧನ ದರ ಶೇ 3.22ರಷ್ಟು ಹೆಚ್ಚಳ

Last Updated 1 ಮೇ 2022, 10:15 IST
ಅಕ್ಷರ ಗಾತ್ರ

ನವದೆಹಲಿ: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ವಿಮಾನ ಇಂಧನ (ಜೆಟ್‌ ಇಂಧನ) ದರವನ್ನು ಭಾನುವಾರ ಶೇ 3.22ರಷ್ಟು ಹೆಚ್ಚಿಸಿವೆ. ವಿಮಾನ ಇಂಧನ ದರವು ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆ ಆಗಿದೆ.

ದೆಹಲಿಯಲ್ಲಿ ವಿಮಾನ ಇಂಧನ ದರವು ಪ್ರತಿ ಕಿಲೋ ಲೀಟರಿಗೆ ₹ 3,649.13ರಷ್ಟು ಹೆಚ್ಚಾಗಿದ್ದು, ₹ 1.16 ಲಕ್ಷಕ್ಕೆ ಏರಿಕೆ ಆಗಿದೆ. ಮುಂಬೈನಲ್ಲಿ ವಿಮಾನ ಇಂಧನ ದರ ಪ್ರತಿ ಕಿಲೋ ಲೀಟರಿಗೆ ₹ 1.15 ಲಕ್ಷಕ್ಕೆ ತಲುಪಿದೆ.(ಒಂದು ಕಿಲೋ ಲೀಟರ್‌ ಎಂದರೆ ಒಂದು ಸಾವಿರ ಲೀಟರ್).

ಸ್ಥಳೀಯ ತೆರಿಗೆಗೆ ಅನುಗುಣವಾಗಿ ರಾಜ್ಯದಿಂದ ರಾಜ್ಯಕ್ಕೆ ದರದಲ್ಲಿ ವ್ಯತ್ಯಾಸ ಆಗುತ್ತದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂಧನ ದರ ಏರಿಕೆಗೆ ಅನುಗುಣವಾಗಿ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ಈ ಪರಿಷ್ಕರಣೆ ಮಾಡಿವೆ.

ಜನವರಿ 1 ರಿಂದ ಏಪ್ರಿಲ್‌ 1ರವರೆಗೆ ಒಟ್ಟಾರೆ ಒಂಬತ್ತು ಬಾರಿ ದರ ಹೆಚ್ಚಳ ಮಾಡಲಾಗಿದೆ. ಇದರಿಂದ ಪ್ರತಿ ಕಿಲೋ ಲೀಟರ್‌ ಬೆಲೆಯು ₹ 42,829ರಷ್ಟು ಏರಿಕೆ ಆಗಿದೆ.

ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಯಾವುದೇ ಬದಲಾವಣೆ ಆಗಿಲ್ಲ. ಸತತ 25ನೇ ದಿನವೂ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.

ದರ ಏರಿಕೆ ವಿವರ (ಕಿಲೋ ಲೀಟರಿಗೆ)

ಮಾರ್ಚ್‌ 16; ₹ 17,136

ಏಪ್ರಿಲ್‌ 1; ₹ 2,258

ಏಪ್ರಿಲ್‌ 16; ₹ 277

ಮೇ 1; ₹ 3,649

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT