ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಗೆ ಹೊಸ ಔಡಿ, ಲಾಂಗ್ ಡ್ರೈವ್ ಹೋಗುವೆ ಎಂದ ಕೊಹ್ಲಿ 

Last Updated 24 ಅಕ್ಟೋಬರ್ 2019, 8:45 IST
ಅಕ್ಷರ ಗಾತ್ರ

ಮುಂಬೈ: ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಔಡಿ ಮುಖ್ಯಸ್ಥ ಬಲ್ಬೀರ್ ಸಿಂಗ್ ಅವರು ಹೊಸ ಔಡಿ ಎ6ಕಾರ್ ಅನ್ನು ಬಿಡುಗಡೆ ಮಾಡಿದರು.

ಇದರ ಎಕ್ಸ್ ಷೋರೂಂ ಬೆಲೆ ₹54.20 ಲಕ್ಷ. ವರ್ಲಿಯಲ್ಲಿನ ಫೇಮಸ್ ಸ್ಟೂಡಿಯೋಸ್‌ದಲ್ಲಿನಡೆಯುತ್ತಿರುವ ಕಾರ್ಯಕ್ರಮದಲ್ಲಿ ಕಂಪನಿ ಮುಖ್ಯಸ್ಥ ಬಲ್ಬೀರ್ ಸಿಂಗ್ ಅವರು ಕಂಪನಿಯ ಬೆಳವಣಿಗೆ ಮತ್ತು ಹೊಸ ಕಾರಿನ ಬಗ್ಗೆ ಮಾಹಿತಿ ನೀಡಿದರು.

‘2012ರಲ್ಲಿ ಮೊದಲ ಔಡಿ ಖರೀದಿಸಿದೆ. ಇದು ಐಷಾರಾಮಿ ಮತ್ತು ಸ್ಪೋರ್ಟ್ಸ್ಲುಕ್ ಹೊಂದಿರುವ ಕಾರ್ ಆಗಿದೆ. ಹೀಗಾಗಿ ಈ ಕಾರಿನ್ನು ಚಲಾಯಿಸುವುದು ಹೆಚ್ಚಿನ ಥ್ರಿಲ್ ನೀಡುತ್ತದೆ ಎಂದು ವಿರಾಟ್ ಕೊಹ್ಲಿ ಅವರು ತಮ್ಮ ಅನುಭವ ಹಂಚಿಕೊಂಡರು. ಹೈವೆಯಲ್ಲಿ ಕಡಿಮೆ ಟ್ರಾಫಿಕ್ ಇರುವ ಕಡೆಗಳಲ್ಲಿ ಲಾಂಗ್ ಡ್ರೈವ್ ಹೋಗಲು ಬಯಸುತ್ತೇನೆ’ಎಂದರು.

ಔಡಿ ಎ6ಬಿಎಸ್೬ ಎಂಜಿನ್ ಹೊಂದಿದೆ. ಗರಿಷ್ಠ ವೇಗ ಗಂಟೆಗೆ 250ಕಿ.ಮೀ. ಸಿಂಗಲ್ ಫ್ರೇಮ್ ಗ್ರಿಲ್ ಹೊಂದಿರುವ ಮೊದಲ ಕಾರ್ ಆಗಿದೆ. ಈ ಮಾದರಿಯು ಹಿಂದಿನದ್ದಕ್ಕಿಂತ ಅಧಿಕ ಉದ್ದ, ಅಗಲ ಮತ್ತು ಎತ್ತರವಾಗಿದೆ.

ಕೆಲವು ವೈಶಿಷ್ಟ್ಯ: ಮ್ಯಾಟ್ರಿಕ್ಸ್ ಎಲ್ಇಡಿ ಹೆಡ್ಲೈಟ್ಸ್, 8ಏರ್ ಬ್ಯಾಗ್, ಟಚ್ ಸ್ಕ್ರೀನ್ ಬೇಸ್ಡ್ ಸೆಂಟರ್ ಕಂನ್ಸೋಲ್, ಔಡಿ ವರ್ಚುವಲ್ ಕಾಕ್ಪಿಟ್ ಎಲೆಕ್ಟ್ರಿಕಲ್‌ಅಡ್ಜೆಸ್ಟೆಬಲ್ ಫ್ರಂಟ್ ಸೀಟ್. ಒಳಾಂಗಣ: 2ಸ್ಕ್ರೀನ್. ಎಂಎಂಐ ಡಿಸ್ಪ್ಲೆ. ಚಾಲನೆ ವೇಳೆ ನಿಮ್ಮ ಭಾವನೆಗಳಿಗೆ ಅನುಗುಣವಾಗಿ ಕಾರಿನ ಒಳಾಂಗಣ ಬದಲಿಸಲು 30ಬಗೆಯ ಬಣ್ಣ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT