ಸೋಮವಾರ, ಸೆಪ್ಟೆಂಬರ್ 27, 2021
21 °C

ಕೋವಿಡ್‌–19: ವಾಹನ ಮೇಳ ಮುಂದಕ್ಕೆ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಮುಂದಿನ ವರ್ಷದ ಫೆಬ್ರುವರಿಯಲ್ಲಿ ಗ್ರೇಟರ್ ನೊಯಿಡಾದಲ್ಲಿ ನಡೆಯಬೇಕಿರುವ ವಾಹನ ಪ್ರದರ್ಶನ ಮೇಳವನ್ನು (ಆಟೊ ಎಕ್ಸ್‌ಪೊ) ಕೋವಿಡ್‌–19 ಸಾಂಕ್ರಾಮಿಕದ ಕಾರಣದಿಂದಾಗಿ ಮುಂದೂಡಲಾಗಿದೆ ಎಂದು ಭಾರತೀಯ ವಾಹನ ತಯಾರಕರ ಒಕ್ಕೂಟ (ಎಸ್‌ಐಎಎಂ) ಸೋಮವಾರ ತಿಳಿಸಿದೆ.

ಈ ಮೇಳಕ್ಕೆ ಭಾರಿ ಸಂಖ್ಯೆಯಲ್ಲಿ ಜನ ಸೇರುವುದರಿಂದ ಪರಸ್ಪರ ಅಂತರ ಕಾಯ್ದುಕೊಳ್ಳುವಂತೆ ನಿಗಾ ವಹಿಸುವುದು ಕಷ್ಟವಾಗಲಿದೆ. ಸೋಂಕು ಹರಡುವ ಸಾಧ್ಯತೆಯು ಗರಿಷ್ಠ ಮಟ್ಟದಲ್ಲಿ ಇರುತ್ತದೆ. ಈ ಕಾರಣಗಳಿಂದಾಗಿ ವಾಹನಗಳ ಪ್ರದರ್ಶನ ಮೇಳವನ್ನು ಮುಂದೂಡಲು ನಿರ್ಧರಿಸಲಾಗಿದೆ ಎಂದು ಒಕ್ಕೂಟದ ಪ್ರಧಾನ ನಿರ್ದೇಶಕ ರಾಜೇಶ್‌ ಮೆನನ್‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕೋವಿಡ್‌ ಪರಿಸ್ಥಿತಿ ಮತ್ತು ಇತರ ಜಾಗತಿಕ ವಾಹನ ಪ್ರದರ್ಶನ ಮೇಳಗಳು ನಡೆಯುವ ದಿನಾಂಕಗಳನ್ನು ಪರಿಗಣಿಸಿ ಮುಂದಿನ ಆವೃತ್ತಿಯ ವಾಹನ ಮೇಳದ ದಿನಾಂಕವನ್ನು ಈ ವರ್ಷದ ಕೊನೆಯಲ್ಲಿ ನಿರ್ಧರಿಸಲಾಗುವುದು ಎಂದು ಅವರು ಹೇಳಿದ್ದಾರೆ.

2020ರ ವಾಹನ ಪ್ರದರ್ಶನ ಮೇಳದಲ್ಲಿ ಆರು ಲಕ್ಷಕ್ಕೂ ಅಧಿಕ ಜನ ಭಾಗವಹಿಸಿದ್ದರು. 108 ಕಂಪನಿಗಳು 352 ವಾಹನಗಳನ್ನು ಪ್ರದರ್ಶಿಸಿದ್ದವು. ಸುಮಾರು 70 ಹೊಸ ವಾಹನಗಳು ಅನಾವರಣಗೊಂಡಿದ್ದವು. 35 ವಿದ್ಯುತ್‌ ಚಾಲಿತ ವಾಹನಗಳು ಕೂಡಾ ಅನಾವರಣ ಆಗಿದ್ದವು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು