ಶನಿವಾರ, ಜುಲೈ 24, 2021
28 °C

ಮೇನಲ್ಲಿ ವಾಹನ ಮಾರಾಟ ಕುಸಿತ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ  : ಪ್ರಮುಖ ವಾಹನ ತಯಾರಿಕಾ ಕಂಪನಿಗಳ ಮೇ ತಿಂಗಳ ಮಾರಾಟದಲ್ಲಿ ಭಾರಿ ಕುಸಿತ ಕಂಡುಬಂದಿದೆ.

 ಲಾಕ್‌ಡೌನ್‌ ಕಾರಣಕ್ಕೆ ಕಂಪನಿಗಳು ತಯಾರಿಕಾ ಚಟುವಟಿಕೆಗಳನ್ನು ನಿಲ್ಲಿಸಿದ್ದವು. ಜತೆಗೆ ಬೇಡಿಕೆಯೂ ಇಲ್ಲದಿರುವುದರಿಂದ ಮಾರಾಟದ ಮೇಲೆ ಭಾರಿ ಪೆಟ್ಟು ಬಿದ್ದಿದೆ.

ಮಾರುತಿ ಸುಜುಕಿ ಇಂಡಿಯಾದ   ಮಾರಾಟ ಶೇ 86ರಷ್ಟು ಕುಸಿತ ಕಂಡಿದ್ದು, ಒಟ್ಟಾರೆ  18,539 ವಾಹನಗಳು ಮಾರಾಟವಾಗಿವೆ. 2019ರ ಮೇನಲ್ಲಿ 1.34 ಲಕ್ಷ ವಾಹನಗಳು ಮಾರಾಟವಾಗಿದ್ದವು.

ದೇಶಿ ಮಾರಾಟ ಶೇ 89ರಷ್ಟು ಹಾಗೂ ರಫ್ತು ಶೇ 49ರಷ್ಟು ಕಡಿಮೆಯಾಗಿದೆ.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಒಟ್ಟಾರೆ ಮಾರಾಟ ಶೇ 79ರಷ್ಟು ಕುಸಿತ ಕಂಡಿದ್ದು 9,560 ವಾಹನಗಳನ್ನು ಮಾರಾಟ ಮಾಡಿದೆ. ದೇಶಿ ಮಾರಾಟ ಶೇ 79ರಷ್ಟು ಕುಸಿದಿದೆ.

ಟೊಯೋಟ ಕಂಪನಿಯು ಮಾರಾಟವೂ ಶೇ 86ರಷ್ಟು ಕುಸಿತ ಕಂಡಿದೆ. 

ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಹೀರೊ ಮೋಟೊ ಕಾರ್ಪ್ ಕಂಪನಿಯ ಮಾರಾಟ ಶೇ 83ರಷ್ಟು ಇಳಿಕೆಯಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.