ಬುಧವಾರ, ಸೆಪ್ಟೆಂಬರ್ 29, 2021
20 °C

ಆಗಸ್ಟ್‌ನಲ್ಲಿ ಪ್ರಯಾಣಿಕ ವಾಹನ ಮಾರಾಟ ಹೆಚ್ಚಳ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಆಗಸ್ಟ್‌ ತಿಂಗಳಲ್ಲಿ ಹುಂಡೈ, ಟಾಟಾ ಮೋಟರ್ಸ್‌, ಮಹೀಂದ್ರ, ಟೊಯೋಟ ಕಿರ್ಲೋಸ್ಕರ್ ಮತ್ತು ಹೋಂಡಾ ಕಂಪನಿಗಳ ಪ್ರಯಾಣಿಕ ವಾಹನಗಳ ಮಾರಾಟವು ಹೆಚ್ಚಳ ಕಂಡಿದೆ. ಆದರೆ, ಸೆಮಿಕಂಡಕ್ಟರ್‌ ಕೊರತೆಯಿಂದಾಗಿ ಮಾರುತಿ ಸುಜುಕಿ ಕಂಪನಿಯ ವಾಹನಗಳ ಮಾರಾಟ ಇಳಿಕೆ ಆಗಿದೆ.

ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್‌ (ಎಂಎಸ್‌ಐಎಲ್‌) ಕಂಪನಿಯ ದೇಶಿ ಮಾರಾಟವು ಆಗಸ್ಟ್‌ನಲ್ಲಿ 1.10 ಲಕ್ಷ ಆಗಿದೆ. ಕಳೆದ ವರ್ಷದ ಆಗಸ್ಟ್‌ನಲ್ಲಿ 1.16 ಲಕ್ಷ ವಾಹನಗಳು ಮಾರಾಟ ಆಗಿದ್ದವು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇ 6ರಷ್ಟು ಇಳಿಕೆ ಆಗಿದೆ. ಆದರೆ, ಒಟ್ಟಾರೆ ಮಾರಾಟವು ಶೇ 5ರಷ್ಟು ಏರಿಕೆಯಾಗಿದೆ.

ಎಲೆಕ್ಟ್ರಾನಿಕ್‌ ಬಿಡಿಭಾಗಗಳ ಕೊರತೆಯಿಂದಾಗಿ 2021ರ ಆಗಸ್ಟ್‌ನಲ್ಲಿ ಮಾರಾಟದ ಮೇಲೆ ಪರಿಣಾಮ ಉಂಟಾಗಿದೆ. ಹೆಚ್ಚಿನ ಪರಿಣಾಮವನ್ನು ತಡೆಯಲು ಸಾಧ್ಯವಾದ ಎಲ್ಲ ಕ್ರಮಗಳನ್ನೂ ತೆಗೆದುಕೊಳ್ಳಲಾಗಿದೆ ಎಂದು ಕಂಪನಿಯು ಪ್ರಕಟಣೆಯಲ್ಲಿ ತಿಳಸಿದೆ.

ಹುಂಡೈ ಮೋಟರ್‌ ಇಂಡಿಯಾ ಕಂಪನಿಯ ಮಾರಾಟವು ಶೇ 2ರಷ್ಟು ಹೆಚ್ಚಾಗಿದೆ. ಮಹೀಂದ್ರ ಕಂಪನಿಯು ತನ್ನ ದೇಶಿ ಪ್ರಯಾಣಿಕ ವಾಹನ ಮಾರಾಟವು ಶೇ 17ರಷ್ಟು ಹೆಚ್ಚಾಗಿದೆ ಎಂದು ತಿಳಿಸಿದೆ.

ಟಾಟಾ ಮೋಟರ್ಸ್‌ನ ಪ್ರಯಾಣಿಕ ವಾಹನ ಮಾರಾಟ ಶೇ 51ರಷ್ಟು ಏರಿಕೆ ಕಂಡಿದೆ. ಕಿಯಾ ಇಂಡಿಯಾದ ಮಾರಾಟವು ಶೇ 55ರಷ್ಟು ಹೆಚ್ಚಾಗಿದೆ. ಹೋಂಡಾ ಕಾರ್ಸ್‌ ಇಂಡಿಯಾದ ಮಾರಾಟ ಶೇ 49ರಷ್ಟು ಹೆಚ್ಚಾಗಿದೆ ಎಂದು ಕಂಪನಿಗಳು ತಿಳಿಸಿವೆ. ಸ್ಕೋಡಾ ಆಟೊ ಇಂಡಿಯಾ ಮತ್ತು ನಿಸಾನ್‌ ಮೋಟರ್‌ ಇಂಡಿಯಾದ  ಮಾರಾಟವು ನಾಲ್ಕು ಪಟ್ಟು ಏರಿಕೆ ಕಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು