ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಟಿ ಬ್ಯಾಂಕ್: ಎಕ್ಸಿಸ್ ಬ್ಯಾಂಕ್‌ ಅತಿದೊಡ್ಡ ಬಿಡ್ಡರ್

Last Updated 21 ಡಿಸೆಂಬರ್ 2021, 19:30 IST
ಅಕ್ಷರ ಗಾತ್ರ

ನವದೆಹಲಿ: ಸಿಟಿ ಬ್ಯಾಂಕ್‌ನ ಗ್ರಾಹಕ ಬ್ಯಾಂಕಿಂಗ್ ವಹಿವಾಟುಗಳ ಖರೀದಿಗೆ ಎಕ್ಸಿಸ್ ಬ್ಯಾಂಕ್ ಅತಿಹೆಚ್ಚಿನ ಮೊತ್ತದ ಬಿಡ್ ಸಲ್ಲಿಸಿದೆ ಎಂದು ಮೂಲಗಳು ತಿಳಿಸಿವೆ.

ಭಾರತದಲ್ಲಿ ಗ್ರಾಹಕ ಬ್ಯಾಂಕಿಂಗ್ ವಹಿವಾಟಿನಿಂದ ನಿರ್ಗಮಿಸುವುದಾಗಿ ಸಿಟಿ ಬ್ಯಾಂಕ್‌ ಏಪ್ರಿಲ್‌ನಲ್ಲಿ ಪ್ರಕಟಿಸಿದೆ. ಕ್ರೆಡಿಟ್ ಕಾರ್ಡ್, ರಿಟೇಲ್ ಬ್ಯಾಂಕಿಂಗ್, ಗೃಹಸಾಲ, ಆಸ್ತಿ ನಿರ್ವಹಣೆ ಸೇವೆಗಳು ಈ ವಹಿವಾಟಿನ ಅಡಿಯಲ್ಲಿ ಇವೆ. ಸಿಟಿ ಬ್ಯಾಂಕ್‌ ತನ್ನ ಗ್ರಾಹಕ ಬ್ಯಾಂಕಿಂಗ್ ವಿಭಾಗದಲ್ಲಿ ದೇಶದಲ್ಲಿ 35 ಶಾಖೆಗಳನ್ನು, ಅಂದಾಜು ನಾಲ್ಕು ಸಾವಿರ ನೌಕರರನ್ನು ಹೊಂದಿದೆ.

ಬ್ಯಾಂಕ್‌ನ ಗ್ರಾಹಕ ಬ್ಯಾಂಕಿಂಗ್‌ನ ಮೌಲ್ಯ ಅಂದಾಜು ₹ 13 ಸಾವಿರ ಕೋಟಿ ಆಗಬಹುದು ಎನ್ನಲಾಗಿದೆ. ಈ ವಿಚಾರವಾಗಿ ಪ್ರತಿಕ್ರಿಯೆ ಕೇಳಿ ಎಕ್ಸಿಸ್ ಬ್ಯಾಂಕ್ ಮತ್ತು ಸಿಟಿಬ್ಯಾಂಕ್‌ಗೆ ಸಲ್ಲಿಸಿದ ಇಮೇಲ್‌ಗೆ ಪ್ರತಿಕ್ರಿಯೆ ಲಭ್ಯವಾಗಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT