ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳಾ ಕ್ರಿಕೆಟ್: ದಕ್ಷಿಣ ಆಫ್ರಿಕಾ ಎದುರು ಭಾರತದಲ್ಲಿ ಟೆಸ್ಟ್, ಏಕದಿನ, T20 ಸರಣಿ

Published 3 ಮೇ 2024, 13:06 IST
Last Updated 3 ಮೇ 2024, 13:06 IST
ಅಕ್ಷರ ಗಾತ್ರ

ಬೆಂಗಳೂರು: ದಕ್ಷಿಣ ಆಫ್ರಿಕಾ ಮಹಿಳಾ ಕ್ರಿಕೆಟ್‌ ತಂಡದ ವಿರುದ್ಧ ಜೂನ್‌ ಹಾಗೂ ಜುಲೈನಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ ಹಾಗೂ ತಲಾ ಮೂರು ಏಕದಿನ, ಟಿ20 ಪಂದ್ಯಗಳ ಸರಣಿಗೆ ಭಾರತ ಆತಿಥ್ಯ ವಹಿಸಲಿದೆ.

ನಿಗದಿತ ಓವರ್‌ಗಳ ಆರೂ ಪಂದ್ಯಗಳು ಬೆಂಗಳೂರಿನಲ್ಲಿ ನಡೆಯಲಿವೆ. ಟೆಸ್ಟ್‌ ಪಂದ್ಯ ಚೆನ್ನೈನಲ್ಲಿ ಆಯೋಜನೆಗೊಳ್ಳಲಿದೆ ಎಂದು ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ತಿಳಿಸಿದೆ.

ಏಕದಿನ ಪಂದ್ಯಗಳು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜೂನ್‌ 16ರಂದು ಆರಂಭಗೊಳ್ಳಲಿವೆ. ಬಳಿಕ ಟೆಸ್ಟ್‌ ಪಂದ್ಯ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ ಜೂನ್‌ 28ರಂದು ಶುರುವಾಗಲಿದೆ. ಈ ಪಂದ್ಯ ಮುಗಿದ ನಂತರ ಮತ್ತೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಜುಲೈ 5, 7, 9ರಂದು ಟಿ20 ಪಂದ್ಯಗಳು ನಡೆಯಲಿವೆ.

ಸೆಪ್ಟೆಂಬರ್‌–ಅಕ್ಟೋಬರ್‌ನಲ್ಲಿ ಮಹಿಳಾ ಟಿ20 ಕ್ರಿಕೆಟ್ ವಿಶ್ವಕಪ್‌ ಟೂರ್ನಿಯು ಬಾಂಗ್ಲಾದೇಶದಲ್ಲಿ ಆಯೋಜನೆಗೊಳ್ಳಲಿದೆ. ಹೀಗಾಗಿ, ಮೂರು ಪಂದ್ಯಗಳ ಚುಟುಕು ಕ್ರಿಕೆಟ್‌ ಸರಣಿಯು, ಭಾರತ–ದಕ್ಷಿಣ ಆಫ್ರಿಕಾ ತಂಡಗಳ ಸಿದ್ಧತೆ, ತಂಡದ ಆಯ್ಕೆಯ ದೃಷ್ಟಿಯಿಂದ ಮಹತ್ವದ್ದಾಗಲಿದೆ.

ಮುಂದೂಡಿಕೆಯಾಗಿದ್ದ ಟೂರ್ನಿಗೆ ಟೆಸ್ಟ್‌ ಸೇರ್ಪಡೆ
ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಮತ್ತು ಟಿ20 ಸರಣಿಯು 2023ರ ವರ್ಷಾಂತ್ಯದಲ್ಲೇ ನಡೆಯಬೇಕಿತ್ತು. ಆದರೆ, ಆ ವರ್ಷ ಅಕ್ಟೋಬರ್‌–ನವೆಂಬರ್‌ನಲ್ಲಿ ಭಾರತದ ಆತಿಥ್ಯದಲ್ಲೇ ಪುರುಷರ ಏಕದಿನ ವಿಶ್ವಕಪ್‌ ಆಯೋಜನೆಗೊಂಡಿದ್ದರಿಂದ, ಮುಂದೂಡಲಾಗಿತ್ತು.

ಇದೀಗ, ನಿಗದಿತ ಓವರ್‌ಗಳ ಟೂರ್ನಿಗೆ ಟೆಸ್ಟ್‌ ಪಂದ್ಯವನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ಮಹಿಳಾ ಕ್ರಿಕೆಟ್‌ನಲ್ಲಿ ಟೆಸ್ಟ್‌ ಮಾದರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ನಿಟ್ಟಿನಲ್ಲಿ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಕ್ರಿಕೆಟ್‌ ಸೌತ್‌ ಆಫ್ರಿಕಾ ಈ ಕ್ರಮ ಕೈಗೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT