ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ದಿನ
ವಾರ
ಮಾಸ
ವಾರ್ಷಿಕ
ದಿನ ಭವಿಷ್ಯ: ಈ ರಾಶಿಯವರ ಬುದ್ಧಿ ಪರಮಾತ್ಮನಲ್ಲಿ ಸ್ಥಿರವಾದರೆ ಜಯ ಖಂಡಿತ
Published 2 ಮೇ 2024, 23:27 IST
ವಿದ್ಯಾಶಂಕರ ಸೋಮಯಾಜಿ, ಕಮ್ಮರಡಿ
ಮೇಷ
ಇಷ್ಟದ್ರವ್ಯ ನಿಮ್ಮಲ್ಲಿಯೇ ಇದ್ದರೂ ಅಜ್ಞಾನದ ಕಾರಣವಾಗಿ ಅದನ್ನು ಬೇರೆಲ್ಲಾ ಕಡೆ ಹುಡುಕುವಂತಾಗುತ್ತದೆ. ಕಟ್ಟಡ ನಿರ್ಮಾಣ ಮಾಡಿಸುತ್ತಿರುವವರಿಗೆ ಲಾಭ –ನಷ್ಟಗಳ ಬಗ್ಗೆ ಪುನರಾವಲೋಕನ ಅಗತ್ಯವೆನಿಸುವುದು.
ವೃಷಭ
ಪಾಲುದಾರಿಕೆ ವ್ಯವಹಾರದಲ್ಲಿ ಸಂಶಯಕ್ಕೆ ಆಸ್ಪದ ಕೊಡದೆ ಪಾರದರ್ಶಕತೆಯನ್ನು ಉಳಿಸಿಕೊಳ್ಳಿ. ಗುರುಗಳ ಆಜ್ಞೆಯನ್ನು ಪಾಲಿಸಿದಲ್ಲಿ ಶ್ರೇಯಸ್ಸಾಗುವುದು. ಬುದ್ಧಿ ಪರಮಾತ್ಮನಲ್ಲಿ ಸ್ಥಿರವಾದರೆ ಜಯ ಖಂಡಿತ.
ಮಿಥುನ
ಮಂಗಳಕರವಾದ ಕಾರ್ಯಕ್ರಮದಲ್ಲಿ ಭಾಗವಹಿಸುವಾಗ ಉಡುಗೆ ತೊಡುಗೆಗಳು ಸಾಂಪ್ರದಾಯಿಕವಾಗಿದ್ದರೆ ಚೆನ್ನ. ವಾಸ ಮಾಡುತ್ತಿರುವ ನಿವಾಸದ ಬಗ್ಗೆ ಮೋಹ ಹೆಚ್ಚುತ್ತದೆ. ಇದರಿಂದ ಬೇಸರವಾಗುತ್ತದೆ.
ಕರ್ಕಾಟಕ
ಕಲ್ಪನೆಗೂ ಮತ್ತು ವಾಸ್ತವಕ್ಕೂ ಅಜಗಜಾಂತರ ವ್ಯತ್ಯಾಸವಿರುವುದು ಅಸಮಾಧಾನಕ್ಕೆ ಕಾರಣವಾಗಬಹುದು. ಕುಟುಂಬದಲ್ಲಿ ನೆಮ್ಮದಿಯ ವಾತಾವರಣವನ್ನು ತಂದುಕೊಳ್ಳುವುದು ನಿಮ್ಮ ಕೈಯಲ್ಲಿದೆ.
ಸಿಂಹ
ವಿಳಂಬವಾಗುತ್ತಿರುವ ಕಾರ್ಯಗಳನ್ನು ಶೀಘ್ರವಾಗಿ ಮುಕ್ತಾಯ ಮಾಡಲು ಕುಲದೇವತೆ ಹಾಗೂ ಗ್ರಾಮದೇವತೆಯ ಮೊರೆ ಹೋಗಿ. ಸ್ನೇಹಿತರ ಕೆಲವು ಅಹಿತಕರ ನಡೆಗಳಿಂದ ಇರಿಸುಮುರಿಸಾಗುವುದು.
ಕನ್ಯಾ
ನಿಮ್ಮದೆ ಕೆಲಸವನ್ನು ಬೇರೆಯವರು ತನ್ನದೆಂದು ಹೇಳಿಕೊಳ್ಳುವುದನ್ನು ನೋಡಬೇಕಾಗಬಹುದು. ತುಂಬಾ ಪ್ರಭಾವಿ ವ್ಯಕ್ತಿಗಳ ಮೇಲೆ ದ್ವೇಷವನ್ನು ಇಟ್ಟುಕೊಂಡು ಅದನ್ನು ಸಾಧಿಸುವುದರಲ್ಲಿ ಹುರುಳಿಲ್ಲ.
ತುಲಾ
ಪಕ್ಷಿಪ್ರೇಮಿಗಳು ಪಕ್ಷಿಯ ಶುಶ್ರೂಷೆಯನ್ನು ಮಾಡುವಿರಿ. ಅದರ ಚೇತರಿಕೆಯಿಂದ ಸಂತೋಷವನ್ನು ಹೊಂದುವಿರಿ. ಕುಟುಂಬದ ಜನರೊಂದಿಗೆ ಮನರಂಜನೆಗಾಗಿ ಸಮಯ ಮೀಸಲಿಡಬೇಕಾಗುತ್ತದೆ.
ವೃಶ್ಚಿಕ
ಯಾರದೆಂದು ಗೊತ್ತಿರದ ಅಪರಾಧಗಳನ್ನು ಬೆಳಕಿಗೆ ತರಲುಹೋದ ನಿಮಗೆ ಅಪರಾಧಿ ಪಟ್ಟ ಸಿಗುವ ಸಾಧ್ಯತೆ ಇದೆ. ಸಾಲಗಳನ್ನು ಇತ್ಯರ್ಥ ಮಾಡದ ಹೊರತು ನಿಮ್ಮನ್ನು ನಿದ್ರಾದೇವಿ ಸಲಹುವುದಿಲ್ಲ.
ಧನು
ಅಪಘಾತ ಆದವರನ್ನು ನೋಡಿಯೂ ಶುಷ್ಕಹೃದಯಿಗಳಾಗಿ ಇದ್ದಲ್ಲಿ ಜನರಿಂದ ನಿಂದನೆಗೊಳಪಡುವಿರಿ. ಸಂಪಾದನೆಯಲ್ಲಿ ನೀವು ಮಾಡುತ್ತಿರುವ ದಾನಾದಿ ಕಾರ್ಯಗಳು ಶ್ರೇಯಸ್ಸನ್ನುಂಟು ಮಾಡುತ್ತವೆ.
ಮಕರ
ಕೆಲವು ವಿಚಾರಗಳು ಭ್ರಾಂತಿಯ ಕಾರಣದಿಂದ ಅನಿಶ್ಚಿತತೆಯನ್ನು ಉಂಟುಮಾಡಬಹುದು. ಕಾರ್ಯಗಳ ನಿರ್ವಹಣೆಯನ್ನು ಇತರರಿಗೆ ಕೊಟ್ಟರೆ ಮಂದಗತಿಯ ಕಾರ್ಯವೈಖರಿಯನ್ನು ನೋಡಬೇಕಾಗುತ್ತದೆ.
ಕುಂಭ
ಇತರರ ಮೊಂಡುತನಕ್ಕಾಗಿ ಕೊಟ್ಟ ಶಿಕ್ಷೆಯನ್ನು ಅವರು ಅನುಭವಿಸುವುದನ್ನು ನೋಡಲಾಗದೆ ಕ್ಷಮಿಸಿಬಿಡುತ್ತೀರಿ. ಮನೆಯಲ್ಲಿ ನಡೆಯುವ ಶುಭಕಾರ್ಯಕ್ಕೆ ಬೇಕಾಗುವ ದ್ರವ್ಯಗಳನ್ನು ತರುತ್ತೀರಿ.
ಮೀನ
ಸಣ್ಣದಾಗಿರುವ ಕಿಚ್ಚಿನಿಂದಲೇ ದೊಡ್ಡ ಬೆಂಕಿ ಹೊತ್ತುವಂತೆ ಸಣ್ಣ ಜಗಳಗಳೇ ಮುಂದೆ ದೊಡ್ಡ ಮನಸ್ತಾಪಗಳಿಗೆ ಕಾರಣವಾಗಬಹುದು. ದಿನಸಿ ಅಂಗಡಿ ಮಾಲೀಕರಿಗೆ ಗ್ರಾಹಕರ ಬೇಡಿಕೆ ಪೂರೈಸಲು ಕಷ್ಟವಾಗುವುದು.