ನವದೆಹಲಿ: ದೇಶದ ಪ್ರಮುಖ ವಾಹನ ತಯಾರಿಕಾ ಕಂಪನಿ ಬಜಾಜ್ ಆಟೊ, ವಾಹನಗಳ ಸಗಟು ಮಾರಾಟ ಆಗಸ್ಟ್‌ನಲ್ಲಿ ಶೇ 16ರಷ್ಟು ಏರಿಕೆಯಾಗಿದ್ದು, 3.97 ಲಕ್ಷ ವಾಹನಗಳು ಮಾರಾಟವಾಗಿವೆ.
ಹಿಂದಿನ ವರ್ಷದ ಇದೇ ಅವಧಿಯಲ್ಲಿ 3.41 ಲಕ್ಷ ವಾಹನಗಳು ಮಾರಾಟವಾಗಿದ್ದವು ಎಂದು ಕಂಪನಿ ಸೋಮವಾರ ತಿಳಿಸಿದೆ.
ದೇಶೀಯ ಮಾರಾಟದಲ್ಲಿ ಶೇ 24ರಷ್ಟು ಏರಿಕೆಯಾಗಿದ್ದು, 2.53 ಲಕ್ಷ ವಾಹನಗಳು ಮಾರಾಟವಾಗಿವೆ. ರಫ್ತು ಪ್ರಮಾಣ ಶೇ 5ರಷ್ಟು ಹೆಚ್ಚಳವಾಗಿದ್ದು, 1.43 ಲಕ್ಷ ವಾಹನಗಳು ಮಾರಾಟವಾಗಿವೆ ಎಂದು ತಿಳಿಸಿದೆ.
ಮಹೀಂದ್ರ ಮಾರಾಟ ಏರಿಕೆ:
ಮಹೀಂದ್ರ ಆ್ಯಂಡ್ ಮಹೀಂದ್ರ ಕಂಪನಿಯ 76,555 ವಾಹನಗಳು ಮಾರಾಟವಾಗಿದ್ದು, ಶೇ 9ರಷ್ಟು ಏರಿಕೆಯಾಗಿದೆ.
ದೇಶೀಯ ವಾಹನಗಳ ಮಾರಾಟದಲ್ಲಿ ಶೇ 16ರಷ್ಟು ಹೆಚ್ಚಳವಾಗಿದ್ದು, 43,277 ವಾಹನಗಳು ಮಾರಾಟವಾಗಿವೆ. ರಫ್ತು ಪ್ರಮಾಣ ಶೇ 26ರಷ್ಟು ಏರಿಕೆಯಾಗಿದ್ದು, 3,060 ವಾಹನಗಳು ರಫ್ತಾಗಿವೆ. 21,917 ಟ್ರ್ಯಾಕ್ಟರ್ ಮಾರಾಟವಾಗಿವೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ 21,676 ಮಾರಾಟವಾಗಿದ್ದವು.