ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೆಟ್‌ ಏರ್‌ವೇಸ್ ಸ್ಥಾಪಕ ನರೇಶ್‌ ಗೋಯಲ್‌ಗೆ 14 ದಿನ ನ್ಯಾಯಾಂಗ ಬಂಧನ

Published 14 ಸೆಪ್ಟೆಂಬರ್ 2023, 12:59 IST
Last Updated 14 ಸೆಪ್ಟೆಂಬರ್ 2023, 12:59 IST
ಅಕ್ಷರ ಗಾತ್ರ

ಮುಂಬೈ (ಪಿಟಿಐ): ಬ್ಯಾಂಕ್‌ಗೆ ವಂಚಿಸಿದ ಪ್ರಕರಣದಲ್ಲಿ ಬಂಧಿತರಾಗಿರುವ ಜೆಟ್‌ ಏರ್‌ವೇಸ್‌ನ ಸ್ಥಾಪಕರಾದ ನರೇಶ್ ಗೋಯಲ್ ಅವರನ್ನು ಪಿಎಂಎಲ್‌ಎ ಕೋರ್ಟ್‌ 14 ದಿನ ಅವಧಿಗೆ ನ್ಯಾಯಾಂಗ ಬಂಧನಕ್ಕೆ ಗುರುವಾರ ಒಪ್ಪಿಸಿತು.

ಕೆನರಾ ಬ್ಯಾಂಕ್‌ಗೆ ₹ 538 ಕೋಟಿ ವಂಚನೆಗೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಗೋಯಲ್‌ರನ್ನು ಬಂಧಿಸಲಾಗಿದೆ. ತಮ್ಮನ್ನು ದಕ್ಷಿಣ ಮುಂಬೈನ ಆರ್ಥರ್‌ ರಸ್ತೆಯ ಜೈಲಿಗೆ ಕಳುಹಿಸಬೇಕು ಎಂಬ ಗೋಯಲ್‌ ಮನವಿಯನ್ನು ಕೋರ್ಟ್‌ ಪುರಸ್ಕರಿಸಿತು.

74 ವರ್ಷದ ಗೋಯಲ್‌ರನ್ನು ಸೆ. 1ರಂದು ಪಿಎಂಎಲ್ಎ ಕಾಯ್ದೆಯಡಿ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಬಂಧಿಸಿದ್ದರು. ಪಿಎಂಎಲ್‌ಎ ವಿಶೇಷ ಕೋರ್ಟ್‌ನ ನ್ಯಾಯಾಧೀಶರಾದ ಎಂ.ಜಿ.ದೇಶಪಾಂಡೆ ಅವರ ಎದುರು ಗುರುವಾರ ಹಾಜರುಪಡಿಸಲಾಗಿತ್ತು.

ಬಳಿಕ, ತಾವು ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಕುಟುಂಬ ಹಾಗೂ ಪರಿಣತ ವೈದ್ಯರಿಂದ ನಿತ್ಯ ಆರೋಗ್ಯ ತಪಾಸಣೆಗೆ ಒಳಗಾಗಲು ಅನುವು ಮಾಡಿಕೊಡಬೇಕು. ನಿಯಮಿತವಾಗಿ ವೈದ್ಯಕೀಯ ಸೌಲಭ್ಯ ಒದಗಿಸಬೇಕು ಎಂದು ಕೋರಿ ಗೋಯಲ್ ಅರ್ಜಿಸಲ್ಲಿಸಿದರು.

‘ಹೃದಯಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಏಷಿಯನ್‌ ಹಾರ್ಟ್ ಇನ್‌ಸ್ಟಿಟ್ಯೂಟ್‌ನಲ್ಲಿ ಶಸ್ತ್ರಚಿಕಿತ್ಸೆಯಾಗಿದೆ. ಈ ಸಮಸ್ಯೆ ಗಂಭೀರವಾಗಿದ್ದು, ಜೀವಕ್ಕೂ ತೊಡಕಾಗಬಹುದಾಗಿದೆ. ಅಲ್ಲದೆ, ಅಧಿಕದೊತ್ತಡ, ಮಧುಮೇಹ ಸಮಸ್ಯೆಗಳು ಇವೆ' ಎಂದು ಉಲ್ಲೇಖಿಸಿದ್ದಾರೆ.

ಈ ಅರ್ಜಿ ಕುರಿತು ಪ್ರತಿಕ್ರಿಯೆ ದಾಖಲಿಸುವಂತೆ ಕೋರ್ಟ್ ಇ.ಡಿ ಪರ ವಕೀಲರಿಗೆ ಸೂಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT