ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರ್ಥಿಕ ವರ್ಷದಲ್ಲೇ ಬ್ಯಾಂಕ್‌ ಷೇರುಗಳ ಇಟಿಎಫ್‌

Last Updated 27 ಮೇ 2019, 17:35 IST
ಅಕ್ಷರ ಗಾತ್ರ

ನವದೆಹಲಿ: ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳ ಷೇರುಗಳ ವಿನಿಮಯ ವಹಿವಾಟು ನಿಧಿ (ಇಟಿಎಫ್‌) ಬಿಡುಗಡೆ ಮಾಡಲು ಕೇಂದ್ರ ಸರ್ಕಾರ ಉದ್ದೇಶಿಸಿದೆ.

ಈ ಕುರಿತು ಇರುವ ಕಾರ್ಯಸಾಧ್ಯತೆಯನ್ನು ಕಂಡುಕೊಳ್ಳಲು ಸಲಹೆಗಾರರನ್ನು ಶೀಘ್ರವೇ ನೇಮಿಸಲಿದೆ ಎಂಧು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರೋದ್ಯಮಗಳ ಇಟಿಎಫ್‌ (ಸಿಪಿಎಸ್‌ಇ ಇಟಿಎಫ್‌) ಮತ್ತು ಭಾರತ್‌–22 ಇಟಿಎಫ್‌ಗಳ ಯಶಸ್ಸಿನ ಬಳಿಕ ಹಣಕಾಸು ಸಂಸ್ಥೆಗಳು ಮತ್ತು ಬ್ಯಾಂಕಿಂಗ್‌ ವಲಯದ ಷೇರುಗಳನ್ನೂ ಇಟಿಎಫ್‌ಗೆ ಬಿಡುಗಡೆ ಮಾಡಲು ಮುಂದಾಗಿದೆ.

ಬ್ಯಾಂಕ್‌ಗಳ ಹಣಕಾಸು ಸ್ಥಿತಿ ಬಲಗೊಳ್ಳುವ ನಿರೀಕ್ಷೆ ಇದೆ. ಹೂಡಿಕೆದಾರರಿಗೆ ಒಂದೇ ಹಣಕಾಸು ಮಾರ್ಗದ ಮೂಲಕ ಹಲವು ಬ್ಯಾಂಕ್‌ಗಳ ಷೇರುಗಳನ್ನು ಹೊಂದುವ ಆಯ್ಕೆಯೂ ಲಭ್ಯವಾಗಲಿದೆ ಎಂದು ತಿಳಿಸಿದ್ದಾರೆ.

ವಿದೇಶಿ ಮಾರುಕಟ್ಟೆಯಲ್ಲಿ ಸಿಪಿಎಸ್‌ಇ ಷೇರುಗಳನ್ನು ಆಧರಿಸಿದ ಇಟಿಎಫ್‌ಗೆ ಚಾಲನೆ ನೀಡಲು ಹಣಕಾಸು ಸಚಿವಾಲಯವು ಹೂಡಿಕೆದಾರರ ಸಲಹೆಗಳನ್ನು ಪಡೆಯಲು ಆರಂಭಿಸಿದೆ.

ಜಾಗತಿಕಇಟಿಎಫ್‌ನಲ್ಲಿ ಹೂಡಿಕೆ ಮಾಡಲುಭಾರಿ ಪ್ರಮಾಣದ ವಿದೇಶಿ ಪಿಂಚಣಿ ನಿಧಿಗಳತ್ತ ಗಮನ ಕೇಂದ್ರೀಕರಿಸಲಾಗಿದೆ. ಹೊಸಇಟಿಎಫ್‌ ಅಭಿವೃದ್ಧಿಪಡಿಸಲು ನಿಧಿ ನಿರ್ವಾಹಕರನ್ನು ಶೀಘ್ರವೇ ನೇಮಿಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT