ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹುಂಡೈ ಕ್ರೆಟಾದ ಬುಕಿಂಗ್ ಆರಂಭ

Published 3 ಜನವರಿ 2024, 15:52 IST
Last Updated 3 ಜನವರಿ 2024, 15:52 IST
ಅಕ್ಷರ ಗಾತ್ರ

ಬೆಂಗಳೂರು: ಹುಂಡೈ ಮೋಟರ್‌ ಇಂಡಿಯಾ ಲಿಮಿಟೆಡ್‌ ತನ್ನ ಹೊಸ ಹುಂಡೈ ಕ್ರೆಟಾದ ಬುಕಿಂಗ್‌ ಆರಂಭಿಸಿದೆ. ಗ್ರಾಹಕರು ದೇಶದ ಯಾವುದೇ ಹುಂಡೈ ವಿತರಕರ ಬಳಿ ₹25 ಸಾವಿರ ಆರಂಭಿಕ ಬುಕಿಂಗ್‌ ಮೊತ್ತ ಪಾವತಿಸಿ ನೋಂದಾಯಿಸಿ ಕೊಳ್ಳಬಹುದು ಎಂದು ಹುಂಡೈ ತಿಳಿಸಿದೆ.

ಎಲ್‌ಇಡಿ ಹೆಡ್‌ಲ್ಯಾಂಪ್‌ ಹೊಂದಿರುವ ವಾಹನವು, ಮೂರು ಎಂಜಿನ್‌ ಆಯ್ಕೆಗಳನ್ನು ಹೊಂದಿದೆ. ಇಂಟಿಗ್ರೇಟೆಡ್ ಇನ್ಫೋಟೈನ್‌ಮೆಂಟ್ ಸ್ಕ್ರೀನ್ ಮತ್ತು ಡಿಜಿಟಲ್ ಕ್ಲಸ್ಟರ್ ವಿವಿಧ ಮಾಹಿತಿಯ ಪ್ರದರ್ಶನ ನೀಡುತ್ತದೆ.

ಈ ವಾಹನವು ಏಳು ವಿವಿಧ ಬಣ್ಣದಲ್ಲಿ (ರೋಬಸ್ಟ್ ಎಮರಾಲ್ಡ್ ಪರ್ಲ್, ಫಿಯರಿ ರೆಡ್, ರೇಂಜರ್ ಖಾಕಿ, ಅಬಿಸ್ ಬ್ಲ್ಯಾಕ್, ಅಟ್ಲಾಸ್ ವೈಟ್ ಮತ್ತು ಟೈಟಾನ್ ಗ್ರೇ ಮತ್ತು 6 ಮೊನೊ-ಟೋನ್ ಹಾಗೂ 1 ಅಟ್ಲಾಸ್‌ ವೈಟ್‌ ಜೊತೆ ಬ್ಲಾಕ್‌ ಡ್ಯುಯಲ್ ಟೋನ್‌) ಲಭ್ಯ ಇರುತ್ತದೆ ಎಂದು ತಿಳಿಸಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT