ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾತ್ರಾ ಅವರಿಗೆ ‘ಇನ್ನೊವೇಟಿವ್ ಸಿಎಫ್‌ಒ’ ಪ್ರಶಸ್ತಿ

Last Updated 30 ಸೆಪ್ಟೆಂಬರ್ 2022, 2:36 IST
ಅಕ್ಷರ ಗಾತ್ರ

ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ (ಬಿಇಎಲ್‌) ವ್ಯವಸ್ಥಾಪಕ ನಿರ್ದೇಶಕ ದಿನೇಶ್ ಕುಮಾರ್ ಬಾತ್ರಾ ಅವರಿಗೆ ‘ಇನ್ನೊವೇಟಿವ್ ಸಿಎಫ್‌ಒ’ ಪ್ರಶಸ್ತಿ ದೊರೆತಿದೆ. ಬಾತ್ರಾ ಅವರು ಕಂಪನಿಯ ಮುಖ್ಯ ಹಣಕಾಸು ಅಧಿಕಾರಿಯೂ (ಸಿಎಫ್ಒ) ಹೌದು.

ಮುಂಬೈನಲ್ಲಿ ಬ್ಯುಸಿನೆಸ್‌ ಲೀಡರ್‌ಶಿಪ್‌ ಅವಾರ್ಡ್ಸ್‌ನ ಎರಡನೆಯ ಆವೃತ್ತಿಯಲ್ಲಿ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ ಎಂದು ಕಂಪನಿಯ ಪ್ರಕಟಣೆ ತಿಳಿಸಿದೆ.

ಬಾತ್ರಾ ಅವರು ಸಿಎಫ್‌ಒ ಆಗಿ ಅಧಿಕಾರ ಸ್ವೀಕರಿಸಿದ ಸಂದರ್ಭದಲ್ಲಿ ಕಂಪನಿಯ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 24 ಸಾವಿರ ಕೋಟಿ ಆಗಿತ್ತು. ಅವರ ನಾಯಕತ್ವದಲ್ಲಿ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 80 ಸಾವಿರ ಕೋಟಿಯ ಗಡಿ ದಾಟಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT