ಬಳ್ಳಾರಿ: ಹಿಂಗಾರು ಹಂಗಾಮಿನಲ್ಲಿ ಬೆಳೆದ ಶೇಂಗಾಕ್ಕೆ ಬಂಪರ್ ಬೆಲೆ ಸಿಗುತ್ತಿದೆ. ಬಳ್ಳಾರಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ (ಎಪಿಎಂಸಿ) ಜ. 23ರಂದು ದಾಖಲೆ ಬೆಲೆಗೆ ಶೇಂಗಾ ಮಾರಾಟವಾಗಿದೆ.

ಆಂಧ್ರಪ್ರದೇಶದ ರೈತ ರಾಮಪ್ಪ, ಎಪಿಎಂಸಿಗೆ ತಂದಿದ್ದ ಉತ್ಕೃಷ್ಟ ಗುಣಮಟ್ಟದ ಶೇಂಗಾ ಕ್ವಿಂಟಲ್ಗೆ ₹10,259 ದರಕ್ಕೆ ಮಾರಾಟವಾಗಿದೆ. ಬಳ್ಳಾರಿಯ ಎಪಿಎಂಸಿಯ ಇತಿಹಾಸದಲ್ಲೇ ಇದು ದಾಖಲೆ. ತಿಂಗಳ ಹಿಂದೆ ಕ್ವಿಂಟಲ್ ಶೇಂಗಾ ₹7,000 ರಿಂದ ₹7,500 ದರದಲ್ಲಿ ಮಾರಾಟವಾಗಿತ್ತು.

ಪ್ರತಿ 100 ಗ್ರಾಂ ಶೇಂಗಾದಲ್ಲಿ (ಸಿಪ್ಪೆ ಸಹಿತ), ಬೀಜದ ಪ್ರಮಾಣ 75 ಗ್ರಾಂನಷ್ಟು ಇರಬೇಕು. ಇಂಥ ಉತ್ಪನ್ನಕ್ಕೆ ಉತ್ತಮ ಬೆಲೆ ಸಿಗುತ್ತಿದೆ. ಬೀಜದ ಪ್ರಮಾಣಕ್ಕೆ ಅನುಗುಣವಾಗಿ ಎಪಿಎಂಸಿಯಲ್ಲಿ ಬೆಲೆ ಸಿಗುತ್ತಿದೆ.

‘ಮಾರುಕಟ್ಟೆಗೆ ಬರುತ್ತಿರುವ ಶೇಂಗಾ ಪ್ರಮಾಣವೂ ಕಡಿಮೆ. ಹೀಗಾಗಿ ಉತ್ತಮ ಬೆಲೆ ಸಿಗುತ್ತಿದೆ. ಮುಂದಿನ ದಿನಗಳಲ್ಲಿ ಬೆಲೆ ಮತ್ತಷ್ಟು ಏರಿಕೆ ಆಗುವ ಸಾಧ್ಯತೆಗಳಿವೆ. ₹11 ಸಾವಿರದ ಗಡಿ ದಾಟಿದರೂ ಅಚ್ಚರಿ ಇಲ್ಲ’ ಎಂದು ಎಪಿಎಂಸಿ ಮಧ್ಯವರ್ತಿಗಳ ಸಂಘದ ಮುಖಂಡ ಗುರುಸ್ವಾಮಿ ತಿಳಿಸಿದರು.

‘ಬಳ್ಳಾರಿ ಎಪಿಎಂಸಿಗೆ ನಿತ್ಯ ತಲಾ 30 ಕೆಜಿ ತೂಕದ 400ರಿಂದ 1000 ಚೀಲ ಶೇಂಗಾ ಬರುತ್ತಿದೆ’ ಎಂದು ವರ್ತಕರು ಮಾಹಿತಿ ನೀಡಿದ್ದಾರೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಎಫ್ಎಕ್ಯೂ ಗುಣಮಟ್ಟದ ಶೇಂಗಾಕ್ಕೆ ಕ್ವಿಂಟಲ್ಗೆ ₹7,263 ನಿಗದಿ ಆಗಿದೆ. ಮಾರುಕಟ್ಟೆ ದರ ಬೆಂಬಲ ಬೆಲೆಗಿಂತಲೂ ಅಧಿಕವಾಗಿದೆ.

ಆಂಧ್ರದ ರೈತರಿಗೆ ಲಾಭ

ಬಳ್ಳಾರಿ ಜಿಲ್ಲೆಯು ಭಾಗಶಃ ನೀರಾವರಿ ಪ್ರದೇಶವಾಗಿದ್ದು ಶೇಂಗಾ ಕೃಷಿ ಕಡಿಮೆಯಿದೆ. ಬೆಲೆ ಏರಿಕೆಯ ಲಾಭ ಆಂಧ್ರ ಪ್ರದೇಶದ ಅನಂತಪುರ, ಕರ್ನೂಲು ಜಿಲ್ಲೆಗಳ ರೈತರಿಗೆ ಸಿಗಲಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ರೈತರು ಬಳ್ಳಾರಿ ಎಪಿಎಂಸಿಗೆ ಶೇಂಗಾ ಮಾರಲು ಬರುತ್ತಾರೆ.

ಬಳ್ಳಾರಿ ಎಪಿಎಂಸಿಯಲ್ಲಿ ಕ್ವಿಂಟಲ್ ಶೇಂಗಾ ದರ ₹10 ಸಾವಿರ ತಲುಪಿದ್ದ ಉದಾಹರಣೆ ಇರಲಿಲ್ಲ. ಇದೇ ಮೊದಲ ಬಾರಿಗೆ ಈ ಗಡಿ ದಾಟಿದೆ. ಶೇಂಗಾ ಅವಕ ಕಡಿಮೆಯಾಗಿದ್ದು ಬೆಲೆ ಏರಿಕೆಗೆ ಕಾರಣ.
ವಿಜಯಕುಮಾರ್, ಎಪಿಎಂಸಿ ಕಾರ್ಯದರ್ಶಿ, ಬಳ್ಳಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.