ಶುಕ್ರವಾರ, ಡಿಸೆಂಬರ್ 4, 2020
22 °C

ಗುತ್ತಿಗೆ ಉದ್ಯೋಗ: ಮುಂಚೂಣಿಯಲ್ಲಿ ಬೆಂಗಳೂರು, ಹೈದರಾಬಾದ್

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ಮುಂಬೈ: ಗುತ್ತಿಗೆ ಆಧಾರಿತ ಉದ್ಯೋಗಾವಕಾಶ ಕಲ್ಪಿಸುವಲ್ಲಿ ಬೆಂಗಳೂರು ಮತ್ತು ಹೈದರಾಬಾದ್‌ ಮುಂಚೂಣಿಯಲ್ಲಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ.

ಕೋವಿಡ್‌–19 ಸಾಂಕ್ರಾಮಿಕದಿಂದಾಗಿ ಕಂಪನಿಗಳು ಉದ್ಯೋಗ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡಿವೆ. ಇದರಿಂದಾಗಿ ಗುತ್ತಿಗೆ ಆಧಾರಿತ ಉದ್ಯೋಗಾವಕಾಶಗಳಿಗೆ ಬೇಡಿಕೆ ಬರುತ್ತಿದೆ ಎಂದು ಗುತ್ತಿಗೆ ಆಧಾರಿತ ಉದ್ಯೋಗ ಒದಗಿಸುವಲ್ಲಿ ಕಂಪನಿಗಳಿಗೆ ನೆರವಾಗುವ ಟೆಕ್‌ಫೈಂಡರ್‌ ಕಂಪನಿ ಹೇಳಿದೆ.‌

ಗುತ್ತಿಗೆ ಆಧಾರಿತ ಉದ್ಯೋಗದ ಒಟ್ಟಾರೆ ಬೇಡಿಕೆಯಲ್ಲಿ ಬೆಂಗಳೂರು ಮತ್ತು ದಾವಣಗೆರೆ ಶೇಕಡ 29ರಷ್ಟು ಪಾಲು ಹೊಂದಿರುವ ಕಾರಣ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿದೆ. ತೆಲಂಗಾಣದ ಹೈದರಾಬಾದ್ ಮತ್ತು ವಾರಂಗಲ್‌ ಒಟ್ಟಾರೆ ಶೇ 24ರಷ್ಟು ಪಾಲು ಹೊಂದಿವೆ. ಮಹಾರಾಷ್ಟ್ರ (ಶೇ 18), ತಮಿಳುನಾಡು (ಶೇ 15) ಹಾಗೂ ದೆಹಲಿ (ಶೇ 14) ನಂತರದ ಸ್ಥಾನದಲ್ಲಿವೆ.

ಜುಲೈ–ಸೆಪ್ಟೆಂಬರ್‌ ಅವಧಿಯಲ್ಲಿ ದೇಶದಾದ್ಯಂತ ಇರುವ 42 ಸಾವಿರ ಗುತ್ತಿಗೆದಾರರಿಂದ ಮಾಹಿತಿ ಸಂಗ್ರಹಿಸಿ ಈ ವರದಿ ನೀಡಿದೆ.

ಒಟ್ಟಾರೆ ಬೇಡಿಕೆಯಲ್ಲಿ ಒಂದನೇ ಶ್ರೇಣಿಯ ನಗರಗಳ ಪಾಲು ಶೇ 58ರಷ್ಟಿದೆ. ಎರಡನೇ ಶ್ರೇಣಿಯ ನಗರಗಳಲ್ಲಿ ಶೇ 32 ಹಾಗೂ ಮೂರನೇ  ಶ್ರೇಣಿಯ ನಗರಗಳಲ್ಲಿ ಶೇ 10ರಷ್ಟು ಬೇಡಿಕೆ ಇದೆ ಎಂದು ತಿಳಿಸಿದೆ.

ಸಾಫ್ಟ್‌ವೇರ್ ಡೆವಲಪರ್ಸ್‌, ಸಾಫ್ಟ್‌ವೇರ್‌ ಎಂಜಿನಿಯರ್‌ಗಳು, ಫ್ರಂಟ್‌ ಎಂಡ್‌ ಡೆವಲಪರ್ಸ್‌, ಡೇಟಾ ಅನಲಿಟಿಕ್ಸ್‌, ವೆಬ್‌ ಡೆವಲಪರ್‌, ಡೇಟಾ ಸೈಂಟಿಸ್ಟ್, ಜಾವಾ ಡೆವಲಪರ್‌ಗಳಿಗೆ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡಲು ಬೇಡಿಕೆ ಬಂದಿದೆ.

ಐ.ಟಿ ಕ್ಷೇತ್ರ ಅಲ್ಲದೆ, ಔಷಧ, ಮಾರಾಟ ಮತ್ತು ಮಾರುಕಟ್ಟೆ, ದೂರಸಂಪರ್ಕ ಹಾಗೂ ವಿಮಾ ವಲಯಗಳಲ್ಲಿಯೂ ಹೊಸ ಗುತ್ತಿಗೆ ಆಧಾರಿತ ಉದ್ಯೋಗಾವಕಾಶಗಳು ಹೆಚ್ಚಾಗಿವೆ ಎಂದು ಅದು ತಿಳಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು