ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಐಎಎಲ್‌ಗೆ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿ

ಸತತ 3ನೇ ವರ್ಷವೂ ಬೆಂಗಳೂರಿಗೆ ಸಂದ ಗೌರವ
Last Updated 11 ಮೇ 2020, 19:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಬಿಐಎಎಲ್‌), ಭಾರತ ಮತ್ತು ಕೇಂದ್ರ ಏಷ್ಯಾ ಪ್ರದೇಶದಲ್ಲಿನ ಅತ್ಯುತ್ತಮ ಪ್ರಾದೇಶಿಕ ವಿಮಾನ ನಿಲ್ದಾಣ ಪ್ರಶಸ್ತಿಗೆ ಭಾಜನವಾಗಿದೆ.

‘ಬಳಕೆದಾರರು ನೀಡುವ ಈ ಪ್ರಶಸ್ತಿಯು ಸತತ ಮೂರನೇ ಬಾರಿಗೆ ‘ಬಿಐಎಎಲ್‌’ಗೆ ಸಂದಿದೆ. ಹನ್ನೊಂದು ವರ್ಷ ಹಳೆಯದಾದ ವಿಮಾನ ನಿಲ್ದಾಣದ ಈ ಸಾಧನೆ ಗಮನಾರ್ಹವಾಗಿದೆ’ ಎಂದು ಬೆಂಗಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ ಲಿಮಿಟೆಡ್‌ನ (ಬಿಐಎಎಲ್‌) ಸಿಇಒ ಹರಿ ಕೆ. ಮರಾರ್‌ ಹೇಳಿದ್ದಾರೆ.

‘ನಮ್ಮ ಪ್ರಯಾಣಿಕರಿಗೆ ಜಾಗತಿಕ ಮಟ್ಟದ ಅನುಭವ ನೀಡುವ ನಮ್ಮ ಬದ್ಧತೆಯನ್ನು ಈ ಪ್ರಶಸ್ತಿಯು ಪುನರುಚ್ಚರಿಸಿದೆ. ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿ ನಾವು ಮುಂಚೂಣಿಯಲ್ಲಿ ಇದ್ದೇವೆ. ವಿಮಾನಯಾನ ಉದ್ದಿಮೆಯು ಸವಾಲುಗಳನ್ನು ಎದುರಿಸುತ್ತಿರುವ ಸಂದರ್ಭದಲ್ಲಿ ನಮ್ಮ ತಂಡದ ನೈತಿಕತೆ ಹೆಚ್ಚಿಸಿದೆ’ ಎಂದು ಹೇಳಿದ್ದಾರೆ.

ಜಾಗತಿಕ ವಿಮಾನ ನಿಲ್ದಾಣ ಪ್ರಶಸ್ತಿಗಳು ವಿಮಾನ ನಿಲ್ದಾಣ ಉದ್ದಿಮೆಯ ಪಾಲಿಗೆ ಪ್ರತಿಷ್ಠಿತ ಪುರಸ್ಕಾರಗಳಾಗಿವೆ. ವಿಮಾನ ಪ್ರಯಾಣಿಕರ ಸಂತೃಪ್ತಿ ಸಮೀಕ್ಷೆ ಆಧರಿಸಿ ಈ ಪ್ರಶಸ್ತಿ ಘೋಷಿಸಲಾಗುವುದು. ವಿಶ್ವದಾದ್ಯಂತ ಇರುವ 550 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳಲ್ಲಿನ ಗ್ರಾಹಕರ ಸೇವೆಗಳು ಮತ್ತು ಸೌಲಭ್ಯಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT