ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ ಬಾಂಡ್‌ ಇಟಿಎಫ್‌₹12,400 ಕೋಟಿ ಸಂಗ್ರಹ

BHARAT BOND ETF GARNERS
Last Updated 25 ಡಿಸೆಂಬರ್ 2019, 15:44 IST
ಅಕ್ಷರ ಗಾತ್ರ

ನವದೆಹಲಿ: ದೇಶದ ಮೊದಲ ಕಾರ್ಪೊರೇಟ್‌ ಬಾಂಡ್‌ ಷೇರು ವಿನಿಮಯ ನಿಧಿಯಾಗಿರುವ ಭಾರತ್‌ ಬಾಂಡ್‌ ಇಟಿಎಫ್‌, ತನ್ನ ಮೊದಲ ಕೊಡುಗೆಯಲ್ಲಿ ₹ 12,400 ಕೋಟಿ ಸಂಗ್ರಹಿಸಿದೆ.

ಈ ತಿಂಗಳ 12ರಿಂದ 20ರವರೆಗೆ ಈ ಇಟಿಎಫ್‌ ಖರೀದಿಗೆ ಅವಕಾಶ ಕಲ್ಪಿಸಿಕೊಡಲಾಗಿತ್ತು. ಈ ಬಾಂಡ್‌ ಇಟಿಎಫ್‌ ಮೂಲಕ ಸಂಗ್ರಹವಾಗುವ ಬಂಡವಾಳವನ್ನು ಕೇಂದ್ರೋದ್ಯಮಗಳಿಗೆ ಮೂಲಸೌಕರ್ಯಗಳನ್ನು ಒದಗಿಸಲು ಬಳಕೆ ಮಾಡಲಾಗುವುದು.

‘ಭಾರತ್‌ ಬಾಂಡ್‌ ಇಟಿಎಫ್‌’ಗೆ ಎಲ್ಲ ಬಗೆಯ ಹೂಡಿಕೆದಾರರಿಂದ ಉತ್ತೇಜಕರ ಪ್ರತಿಕ್ರಿಯೆ ದೊರೆತಿದೆ. ಮೂರು ಮತ್ತು 10 ವರ್ಷಗಳ ಬಾಂಡ್‌ಗಳಿಗೆ ನಿಗದಿಪಡಿಸಿದ್ದ ಮೊತ್ತಕ್ಕಿಂತ ಹೆಚ್ಚು ಹಣ ಸಂಗ್ರಹವಾಗಿದೆ. 55 ಸಾವಿರ ರಿಟೇಲ್‌ ಹೂಡಿಕೆದಾರರು ಈ ಹೂಡಿಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿರುವುದು ಮಹತ್ವದ ಸಂಗತಿಯಾಗಿದೆ’ ಎಂದು ಹೂಡಿಕೆ ಮತ್ತು ಸರ್ಕಾರಿ ಆಸ್ತಿ ನಿರ್ವಹಣೆ ಇಲಾಖೆಯ (ಡಿಐಪಿಎಎಂ) ಕಾರ್ಯದರ್ಶಿ ಟಿ. ಕೆ. ಪಾಂಡೆ ಅವರು ಟ್ವೀಟ್‌ ಮಾಡಿದ್ದಾರೆ.

ಸಂಗ್ರಹವಾದ ಮೊತ್ತವನ್ನು ಕೇಂದ್ರೋದ್ಯಮಗಳ ‘ಎಎಎ’ ಮಾನದಂಡದ ಬಾಂಡ್ಸ್‌ಗಳಲ್ಲಿ ಮಾತ್ರ ತೊಡಗಿಸಲು ನಿರ್ಧರಿಸಲಾಗಿದೆ.

ಡಿಮ್ಯಾಟ್‌ ಖಾತೆ ಹೊಂದಿಲ್ಲದವರ ಅನುಕೂಲಕ್ಕಾಗಿ ‘ಭಾರತ್‌ ಬಾಂಡ್‌ ಫಂಡ್‌ ಆಫ್‌ ಫಂಡ್ಸ್‌ (ಎಫ್‌ಒಎಫ್‌) ಆರಂಭಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT