ಮಂಗಳವಾರ, 17 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

2023ರ ಏಪ್ರಿಲ್‌ 1ರಿಂದ ದೇಶದಲ್ಲೇ ಹೊಸ ಕಾರುಗಳ ಕ್ರ್ಯಾಷ್‌ ಟೆಸ್ಟ್‌

ಫಾಲೋ ಮಾಡಿ
Comments

ನವದೆಹಲಿ: ದೇಶದಲ್ಲಿಯೇ ಹೊಸ ಕಾರುಗಳ ಕ್ರ್ಯಾಷ್‌ ಟೆಸ್ಟ್‌ ನಡೆಸಿ ರ್‍ಯಾಂಕಿಂಗ್ ನೀಡುವ ‘ಭಾರತ್‌ ನ್ಯೂ ಕಾರ್‌ ಅಸೆಸ್‌ಮೆಂಟ್ ಪ್ರೊಗ್ರಾಂ’ಗೆ (ಭಾರತ್‌ ಎನ್‌ಸಿಎಪಿ) 2023ರ ಏಪ್ರಿಲ್‌ 1ರಿಂದ ಜಾರಿಗೆ ಬರಲಿದೆ.

ಕೇಂದ್ರ ಸರ್ಕಾರವು ಶನಿವಾರ ನೀಡಿರುವ ಅಧಿಕೃತ ಹೇಳಿಕೆಯ ಪ್ರಕಾರ, ಪ್ರಯಾಣಿಕರನ್ನು ಸಾಗಿಸುವ, ಎಂಟು ಆಸನಗಳು ಇರುವ, 3.5 ಟನ್‌ಗಿಂತಲೂ ಕಡಿಮೆ ತೂಕದ, ದೇಶದಲ್ಲಿ ತಯಾರಾದ ಅಥವಾ ಆಮದು ಮಾಡಿಕೊಂಡಿರುವ ವಾಹನಗಳಿಗೆ ‘ಭಾರತ್‌ ಎನ್‌ಸಿಎಪಿ' ಅನ್ವಯವಾಗಲಿದೆ.

ವಯಸ್ಕರ ಸುರಕ್ಷತೆ, ಮಕ್ಕಳ ಸುರಕ್ಷತೆ ಹಾಗೂ ಸುರಕ್ಷತೆ ನೆರವಾಗುವ ತಂತ್ರಜ್ಞಾನಗಳ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ. ಪರೀಕ್ಷಾ ಸಂಸ್ಥೆಗಳಲ್ಲಿ ವಾಹನಗಳ ಪರಿಶೀಲನೆ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ವಿವರಿಸಲಾಗಿದೆ.

ವಾಹನಗಳಿಗೆ ಕ್ರ್ಯಾಷ್‌ ಟೆಸ್ಟ್‌ ನಡೆಸಿ, ಅದರ ಆಧಾರದಲ್ಲಿ ರ್‍ಯಾಂಕಿಂಗ್ ನೀಡುವ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಶುಕ್ರವಾರ ಸರಣಿ ಟ್ವೀಟ್‌ ಮಾಡುವ ಮೂಲಕ ಮಾಹಿತಿ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT