ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ್‌ಪೇ ಸಿಇಒ ಆಗಿ ನಳಿನ್‌ ನೇಗಿ ನೇಮಕ

Published 16 ಏಪ್ರಿಲ್ 2024, 13:52 IST
Last Updated 16 ಏಪ್ರಿಲ್ 2024, 13:52 IST
ಅಕ್ಷರ ಗಾತ್ರ

ನವದೆಹಲಿ: ಫಿನ್‌ಟೆಕ್‌ ಕಂಪನಿಯಾದ ಭಾರತ್‌ಪೇ ಸಿಇಒ ಆಗಿ ನಳಿನ್‌ ನೇಗಿ ನೇಮಕವಾಗಿದ್ದಾರೆ.

ಸುಹೇಲ್‌ ಸಮೀರ್ ಅವರು ಸಿಇಒ ಹುದ್ದೆಯಿಂದ ಕೆಳಗಿಳಿದ ಬಳಿಕ 2023ರ ಜನವರಿಯಿಂದ ನೇಗಿ ಅವರು ಹಂಗಾಮಿ ಸಿಇಒ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. 2022ರಲ್ಲಿ ಭಾರತ್‌ಪೇ ಕಂಪನಿಗೆ ಸೇರ್ಪಡೆಗೊಂಡಿದ್ದರು. ಫಿನ್‌ಟೆಕ್‌ ಹಾಗೂ ಬ್ಯಾಂಕಿಂಗ್‌ ಕ್ಷೇತ್ರದಲ್ಲಿ ಅವರಿಗೆ 28 ವರ್ಷಗಳಷ್ಟು ಸೇವಾನುಭವ ಇದೆ.

‘ಹಂಗಾಮಿ ಸಿಇಒ ಆಗಿದ್ದ ವೇಳೆ ನೇಗಿ ಅವರು ಭಾರತ್‌ಪೇ ಬೆಳವಣಿಗೆಗೆ ಉತ್ತಮ ಕೊಡುಗೆ ನೀಡಿದ್ದಾರೆ. ಫಿನ್‌ಟೆಕ್‌ ವಲಯದಲ್ಲಿ ಅವರಿಗೆ ಇರುವ ಅನುಭವವು ಕಂಪನಿಯು ಮತ್ತಷ್ಟು ಬೆಳವಣಿಗೆ ಹೊಂದಲು ನೆರವಾಗಲಿದೆ’ ಎಂದು ಭಾರತ್‌ಪೇ ಆಡಳಿತ ಮಂಡಳಿಯ ಮುಖ್ಯಸ್ಥ ರಜನೀಶ್‌ ಕುಮಾರ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT