ಮಂಗಳವಾರ, ಜೂನ್ 2, 2020
27 °C

ಕ್ರೆಡ್‌ಆರ್‌: ಬೈಬ್ಯಾಕ್‌ ಪ್ಲಸ್‌ ಯೋಜನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೈಕ್‌ಗಳ ಮರು ಮಾರಾಟ ಕಂಪನಿ ಕ್ರೆಡ್‍ಆರ್ ಬೈಬ್ಯಾಕ್ ಪ್ಲಸ್ ಯೋಜನೆ ಪ್ರಕಟಿಸಿದೆ. ಈ ಸೌಲಭ್ಯವು ಬೆಂಗಳೂರಿನಲ್ಲಿರುವ ಕ್ರೆಡ್‍ಆರ್ ಷೋರೂಂಗಳಲ್ಲಿ ಲಭ್ಯವಿದೆ. ಈ ಬೈಕ್‌,  ಬೈಬ್ಯಾಕ್ ಕಾರ್ಯಕ್ರಮದಡಿ ಗ್ರಾಹಕರು ದ್ವಿಚಕ್ರ ವಾಹನ  ಖರೀದಿಸುವಾಗ ಭರವಸೆಯ ಬೈಬ್ಯಾಕ್ ಮೌಲ್ಯ ಪಡೆಯಲಿದ್ದಾರೆ. ಹೀಗೆ ಗಳಿಸಿದ ಮೌಲ್ಯವನ್ನು ಖರೀದಿ ಮಾಡಿದ ದ್ವಿಚಕ್ರ ವಾಹನದ ಮರು ಮಾರಾಟ ಮಾಡುವ ಸಂದರ್ಭದಲ್ಲಿ 12 ತಿಂಗಳೊಳಗೆ ಮರಳಿ ಪಡೆಯಬಹುದಾಗಿದೆ.

 ಲಾಕ್‍ಡೌನ್ ಮುಗಿದ ನಂತರ ಬಹುತೇಕ ಜನರು ಸಮೂಹ ಅಥವಾ ಸಾರ್ವಜನಿಕ ಸಾರಿಗೆಗಳಲ್ಲಿ ಪ್ರಯಾಣ ಮಾಡುವುದನ್ನು ನಿಲ್ಲಿಸಿ ತಮ್ಮ ದೈನಂದಿನ ಚಟುವಟಿಕೆಗಳ ಪ್ರಯಾಣಕ್ಕೆ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನಗಳನ್ನು ಖರೀದಿಸಲಿದ್ದಾರೆ ಎಂಬ ನಿರೀಕ್ಷೆಯನ್ನು ಕ್ರೆಡ್‍ಆರ್ ಹೊಂದಿದೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.