ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ ಪೂರ್ವದ ಸ್ಥಿತಿಗೆ ವಾಣಿಜ್ಯ ಚಟುವಟಿಕೆ: ನೊಮುರ

Last Updated 16 ಆಗಸ್ಟ್ 2021, 14:38 IST
ಅಕ್ಷರ ಗಾತ್ರ

ಮುಂಬೈ: ದೇಶದಲ್ಲಿ ವಾಣಿಜ್ಯ ಚಟುವಟಿಕೆಗಳು ಸತತ ಎರಡು ವಾರಗಳಿಂದ ಏರುಗತಿಯಲ್ಲಿ ಸಾಗಿವೆ. ಆಗಸ್ಟ್‌ 15ಕ್ಕೆ ಕೊನೆಗೊಂಡ ವಾರದಲ್ಲಿ ಕೋವಿಡ್‌ ಪೂರ್ವದ ಮಟ್ಟವನ್ನು ದಾಟಿವೆ ಎಂದು ಜಪಾನ್ ಮೂಲದ ಬ್ರೋಕರೇಜ್ ಸಂಸ್ಥೆ ನೊಮುರ ಹೇಳಿದೆ. 2020ರ ಮಾರ್ಚ್‌ನಲ್ಲಿ ಕೋವಿಡ್‌ ಅಪ್ಪಳಿಸಿದಾಗಿನಿಂದ ಚಟುವಟಿಕೆಗಳು ಈ ಮಟ್ಟವನ್ನು ತಲುಪಿದ್ದು ಇದೇ ಮೊದಲು.

ನೊಮುರ ಇಂಡಿಯಾ ವಾಣಿಜ್ಯ ಪುನರಾರಂಭ ಸೂಚ್ಯಂಕವು (ಎನ್‌ಐಬಿಆರ್‌ಐ) ದೇಶದ ವಾಣಿಜ್ಯ ಚಟುವಟಿಕೆಗಳನ್ನು ಕೋವಿಡ್‌ ಪೂರ್ವದ ಸ್ಥಿತಿಯೊಂದಿಗೆ ಪ್ರತಿ ವಾರವೂ ಹೋಲಿಕೆ ಮಾಡಿ ನೋಡುತ್ತದೆ. ಈ ಸೂಚ್ಯಂಕವು ಆಗಸ್ಟ್‌ 15ಕ್ಕೆ ಕೊನೆಗೊಂಡ ವಾರದಲ್ಲಿ 101.2ಕ್ಕೆ ತಲುಪಿದೆ. ಅದರ ಹಿಂದಿನ ವಾರದಲ್ಲಿ ಇದು 99.6ರಲ್ಲಿ ಇತ್ತು.

ಹಿಂದಿನ ವರ್ಷ ರಾಷ್ಟ್ರಮಟ್ಟದಲ್ಲಿ ಲಾಕ್‌ಡೌನ್‌ ಜಾರಿಗೆ ಬಂದ ನಂತರ, ಏಪ್ರಿಲ್‌ನಲ್ಲಿ ಸೂಚ್ಯಂಕವು ತೀವ್ರ ಕುಸಿತ ಕಂಡಿತ್ತು. ನಂತರದಲ್ಲಿ ಸ್ಥಿರವಾದ ಬೆಳವಣಿಗೆ ಕಂಡಿತ್ತು. ಆದರೆ, ಕೋವಿಡ್‌ನ ಎರಡನೆಯ ಅಲೆಯ ಸಂದರ್ಭದಲ್ಲಿ ಸೂಚ್ಯಂಕ ಮತ್ತೆ ಕುಸಿಯಿತು. ಎರಡನೆಯ ಅಲೆಯ ತೀವ್ರತೆ ತಗ್ಗಿದಂತೆ, ಸೂಚ್ಯಂಕವು ಏರಿಕೆ ಕಂಡಿತು.

‘ಎರಡನೆಯ ಅಲೆಯ ನಂತರದಲ್ಲಿ ಸೂಚ್ಯಂಕವು ಬಹಳ ವೇಗವಾಗಿ ಏರಿಕೆ ಕಂಡಿದೆ. ಮೊದಲ ಅಲೆಯ ನಂತರ 100ರ ಸಮೀಪ ಬರಲು ಸೂಚ್ಯಂಕಕ್ಕೆ ಸರಿಸುಮಾರು 10 ತಿಂಗಳು ಬೇಕಾಗಿತ್ತು. ಆದರೆ, ಎರಡನೆಯ ಅಲೆಯ ನಂತರ ಮೂರೇ ತಿಂಗಳಿನಲ್ಲಿ ಸೂಚ್ಯಂಕವು 100ರ ಗಡಿಯನ್ನು ದಾಟಿದೆ’ ಎಂದು ನೊಮುರ ಸಂಸ್ಥೆ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT