ಬುಧವಾರ, ಡಿಸೆಂಬರ್ 1, 2021
20 °C

ಆರು ತಿಂಗಳಲ್ಲಿ ಮೂರು ಎಲೆಕ್ಟ್ರಿಕ್‌ ವಾಹನ: ಬಿಎಂಡಬ್ಲ್ಯು

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಐಷಾರಾಮಿ ಕಾರು ತಯಾರಿಸುವ ಜರ್ಮನಿಯ ಬಿಎಂಡಬ್ಲ್ಯು ಕಂಪನಿಯು ದೇಶದಲ್ಲಿ ತನ್ನ ವಿದ್ಯುತ್‌ ಚಾಲಿತ ವಾಹನಗಳ ಪಯಣಕ್ಕೆ ವೇಗ ನೀಡಲು ಮುಂದಿನ ಆರು ತಿಂಗಳಿನಲ್ಲಿ ಮೂರು ವಿದ್ಯುತ್ ಚಾಲಿತ ವಾಹನಗಳನ್ನು ಬಿಡುಗಡೆ ಮಾಡುವುದಾಗಿ ಗುರುವಾರ ತಿಳಿಸಿದೆ.

ಸಂಪೂರ್ಣ ವಿದ್ಯುತ್‌ ಚಾಲಿತ ಎಸ್‌ಯುವಿ ‘ಬಿಎಂಡಬ್ಲ್ಯು ಐಎಕ್ಸ್‌’ಅನ್ನು 30 ದಿನಗಳಲ್ಲಿ, ಮಿನಿ ಎಲೆಕ್ಟ್ರಿಕ್‌ ವಾಹನವನ್ನು 90 ದಿನಗಳಲ್ಲಿ ಹಾಗೂ ವಿದ್ಯುತ್ ಚಾಲಿತ ಮೊದಲ ಸೆಡಾನ್ ‘ಎಲೆಕ್ಟ್ರಿಕ್‌ ಐ4’ ಮಾದರಿಯನ್ನು 180 ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಬಿಎಂಡಬ್ಲ್ಯು ಸಮೂಹದ ಭಾರತದ ಅಧ್ಯಕ್ಷ ವಿಕ್ರಂ ಪವ್ಹಾ ಮಾಹಿತಿ ನೀಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು