ಬ್ಯಾಂಕ್‌ ಆಫ್‌ ಬರೋಡಾ ರೈತರಿಗಾಗಿ ಕೃಷಿ ಮೇಳ

7

ಬ್ಯಾಂಕ್‌ ಆಫ್‌ ಬರೋಡಾ ರೈತರಿಗಾಗಿ ಕೃಷಿ ಮೇಳ

Published:
Updated:

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಬ್ಯಾಂಕ್ ಆಫ್‌ ಬರೋಡಾ ಇದೇ 16ರವರೆಗೆ ರೈತರಿಗೆ ಸಾಲ ಸೌಲಭ್ಯ, ಹಣಕಾಸು ಸಾಕ್ಷರತೆ ಬಗ್ಗೆ ಅರಿವು ಮೂಡಿಸುವ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.

‘2022ರ ವೇಳೆಗೆ ಕೃಷಿಕರ ಆದಾಯವನ್ನು ದುಪ್ಪಟ್ಟುಗೊಳ್ಳಿಸುವ ಕೇಂದ್ರ ಸರ್ಕಾರದ ಕಾರ್ಯಕ್ರಮಕ್ಕೆ ಪೂರಕವಾಗಿ ಬ್ಯಾಂಕ್‌ ಅ. 1ರಿಂದ 16ರವರೆಗೆ ಈ ಕಾರ್ಯಕ್ರಮ ಹಮ್ಮಿಕೊಂಡಿದೆ’ ಎಂದು ಬ್ಯಾಂಕ್‌ನ ಬೆಂಗಳೂರು ವಲಯದ ಜನರಲ್‌ ಮ್ಯಾನೇಜರ್‌ ಬೀರೇಂದ್ರ ಕುಮಾರ್‌ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಕೃಷಿ ಕ್ಷೇತ್ರದ ಸಮೃದ್ಧಿಯಿಂದಲೇ ಭಾರತದ ಪ್ರಗತಿ’ ಧ್ಯೇಯದಲ್ಲಿ ನಂಬಿಕೆ ಇರಿಸಿ ವಿಶೇಷ ಸಾಲ ವಿತರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ರೈತರು ತಮ್ಮ ಹಣಕಾಸಿನ ಅಗತ್ಯಗಳನ್ನು ಈಡೇರಿಸಿಕೊಳ್ಳಲು ಇದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ಅವರು ಮನವಿ ಮಾಡಿಕೊಂಡರು.

‘ಆಹಾರ ನಷ್ಟವಾಗುವ ಪ್ರಮಾಣವನ್ನು ಗಮನಾರ್ಹವಾಗಿ ತಗ್ಗಿಸುವ ಬಗ್ಗೆಯೂ ರೈತರಲ್ಲಿ ಅರಿವು ಮೂಡಿಸಲು ಬ್ಯಾಂಕ್‌ ಕಾರ್ಯಪ್ರವೃತ್ತವಾಗಿದೆ. ಇದೇ 16ರ  ವಿಶ್ವ ಆಹಾರ ದಿನವನ್ನು ‘ಬರೋಡಾ ಕಿಸಾನ್‌ ದಿವಸ್‌’ ಎಂದು ಆಚರಿಸಲು ನಿರ್ಧರಿಸಲಾಗಿದೆ. 

‘ಕೃಷಿಕರಿಗೆ ಬ್ಯಾಂಕ್‌ನ ವಿವಿಧ ಸಾಲ ಸೌಲಭ್ಯಗಳನ್ನು ಪರಿಚಯಿಸಿ ಅವರನ್ನು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಂಕಿಂಗ್ ಸೇವಾ ವ್ಯಾಪ್ತಿಗೆ ತರಲಾಗುವುದು’ ಎಂದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !