ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಷ್‌ ನಿವ್ವಳ ಲಾಭ ₹ 184 ಕೋಟಿ

Last Updated 13 ಫೆಬ್ರುವರಿ 2021, 12:53 IST
ಅಕ್ಷರ ಗಾತ್ರ

ನವದೆಹಲಿ: ವಾಹನ ಬಿಡಿಭಾಗ ತಯಾರಿಕೆ ಮತ್ತು ತಂತ್ರಜ್ಞಾನ ಸೇವಾ ಸಂಸ್ಥೆ ಬಾಷ್ ಲಿಮಿಟೆಡ್ ಡಿಸೆಂಬರ್‌ ತ್ರೈಮಾಸಿಕದಲ್ಲಿ ₹ 184.15 ಕೋಟಿ ನಿವ್ವಳ ಲಾಭ ಗಳಿಸಿದೆ. ಹಿಂದಿನ ಹಣಕಾಸು ವರ್ಷದ ಇದೇ ಅವಧಿಯಲ್ಲಿದ್ದ ₹ 190.33 ಕೋಟಿಗೆ ಹೋಲಿಸಿದರೆ ಈ ಬಾರಿ ಲಾಭದಲ್ಲಿ ಶೇ 3.24ರಷ್ಟು ಇಳಿಕೆ ಆಗಿದೆ.

ಈ ತ್ರೈಮಾಸಿಕದಲ್ಲಿ ಸಂಸ್ಥೆಯ ವರಮಾನ ₹ 2,536.64 ಕೋಟಿಗಳಿಂದ ₹ 3,029.64 ಕೋಟಿಗಳಿಗೆ ಏರಿಕೆಯಾಗಿದೆ.

‘ಕಳೆದ ತ್ರೈಮಾಸಿಕದಲ್ಲಿ ಹಬ್ಬದ ಋತುವಿನ, ವಿಶೇಷವಾಗಿ ಟ್ರ್ಯಾಕ್ಟರ್‌ ಮತ್ತು ಪ್ರಯಾಣಿಕರ ಆಟೊಮೊಟಿವ್‌ ವಿಭಾಗಗಳಲ್ಲಿ ಮಾರಾಟದ ಪ್ರಮಾಣವು ನಿರೀಕ್ಷೆಗಿಂತ ಉತ್ತಮವಾಗಿತ್ತು. ಹೀಗಿದ್ದರೂ, ಪೂರೈಕೆ ವ್ಯವಸ್ಥೆಯಲ್ಲಿನ ಏರಿಳಿತವು ಬೆಳವಣಿಗೆಗೆ ಅಡ್ಡಿಪಸುತ್ತಲೇ ಇದೆ’ ಎಂದು ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸೌಮಿತ್ರ ಭಟ್ಟಾಚಾರ್ಯ ತಿಳಿಸಿದ್ದಾರೆ.

‘ಕಳೆದ ವರ್ಷದಿಂದ ಉದ್ಯಮವು ಸೆಮಿಕಂಡಕ್ಟರ್‌ ಪೂರೈಕೆಯಲ್ಲಿ ಕೊರತೆ ಎದುರಿಸುತ್ತಿದೆ. ಇದರಿಂದಾಗಿ ಕಂಪನಿಯ ಆಮದು ಮತ್ತು ಆಟೊಮೊಟಿವ್‌ ತಯಾರಿಕೆಯ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಿದೆ’ ಎಂದು ಅವರು ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT