ಲಖನೌ (ಪಿಟಿಐ): ಕರ್ನಾಟಕ ತಂಡ ಇನ್ನೂ ಎರಡು ದಿನಗಳ ಆಟ ಬಾಕಿಯಿರುವಂತೆ ರಣಜಿ ಟ್ರೋಫಿ ಫೈನಲ್ಗೆ ಒಂದು ಕಾಲನ್ನಿಟ್ಟಿದೆ. 739 ರನ್ಗಳ ಬೃಹತ್ ಮೊತ್ತ ಪೇರಿಸಿದ ಕರ್ನಾಟಕ, ಮಂಗಳವಾರ ಮೂರನೇ ದಿನದಾಟದ ಕೊನೆಗೆ ಉತ್ತರಾಖಂಡ ತಂಡವನ್ನು 5 ವಿಕೆಟ್ಗೆ 149 ರನ್ಗಳಿಗೆ ಸೀಮಿತಗೊಳಿಸಿದೆ.

ಸೋಮವಾರ 6 ವಿಕೆಟ್ಗೆ 689 ರನ್ ಗಳಿಸಿದ್ದ ದೇವದತ್ತ ಪಡಿಕ್ಕಲ್ ಪಡೆ, ಇನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳಲು ಮುಂದಾಗದೇ ಆಟ ಮುಂದುವರಿಸಿತು. ಅಂತಿಮವಾಗಿ ಸುದೀರ್ಘ 195 ಓವರುಗಳ ಆಟದಲ್ಲಿ 736 ರನ್ಗಳಿಗೆ ಆಲೌಟ್ ಆಯಿತು. ಉತ್ತರಾಖಂಡದ ಮನೋಸ್ಥೈರ್ಯ ಉಡುಗಿಸುವ ಉದ್ದೇಶ ಇದರ ಹಿಂದಿತ್ತು.

121 ರನ್ಗಳೊಡನೆ ಆಟ ಮುಂದುವರಿಸಿದ ಸ್ಮರಣ್ ರವಿಚಂದ್ರನ್ ಮತ್ತು ವಿದ್ಯಾಧರ ಪಾಟೀಲ (ಸೋಮವಾರ: ಔಟಾಗದೇ 35) ಅವರು ಏಳನೇ ವಿಕೆಟ್ಗೆ ಶತಕದ ಜೊತೆಯಾಟ (109 ರನ್) ಪೂರೈಸಿದರು. ಸ್ಮರಣ್ 135 ರನ್ (216 ಎಸೆತ, 12 ಬೌಂಡರಿ) ಗಳಿಸಿ ಮೊದಲನೆಯವರಾಗಿ ನಿರ್ಗಮಿಸಿದರು. ಇನ್ನೊಂದು ಕಡೆ ವಿದ್ಯಾಧರ ಪಾಟೀಲ ಅರ್ಧಶತಕ ಪೂರೈಸಿ 114 ಎಸೆತಗಳಲ್ಲಿ 54 ರನ್ ಗಳಿಸಿದರು. ಒಂದು ಮತ್ತು ಎರಡು ರನ್ಗಳ ಮೂಲಕ ಇನಿಂಗ್ಸ್ ಕಟ್ಟಿದ ಅವರು ಒಂದು ಸಿಕ್ಸರ್, ಎರಡು ಬೌಂಡರಿ ಬಾರಿಸಿದರು.

ಈ ಪರ್ವತದಂಥ ಮೊತ್ತದೆದುರು ಇನಿಂಗ್ಸ್ ಆರಂಭಿಸಿದ ಉತ್ತರಾಖಂಡ ನಿಯಮಿತವಾಗಿ ವಿಕೆಟ್ಗಳನ್ನು ಕಳೆದುಕೊಂಡಿತು. ತಂಡವು, ಕರ್ನಾಟಕದ ಮೊತ್ತಕ್ಕಿಂತ ಇನ್ನೂ 587 ರನ್ಗಳಷ್ಟು ಹಿಂದಿದೆ. ಪೂರ್ಣ ಎರಡು ದಿನಗಳ ಆಟ ಇರುವ ಕಾರಣ ಉತ್ತರಾಖಂಡದ ಮೇಲೆ ಫಾಲೊಆನ್ ಹೇರಿ ಆಲೌಟ್ ಮಾಡುವ ಅವಕಾಶವೂ ಕರ್ನಾಟಕದ ಮುಂದಿದೆ.

ವಿದ್ಯಾಧರ ಪಾಟೀಲ (26ಕ್ಕೆ2) ಅವರು ಉತ್ತರಾಖಂಡದ ಆರಂಭ ಆಟಗಾರರಾದ ಭುಪೇನ್ ಲಾಲ್ವಾನಿ (15) ಮತ್ತು ಪ್ರಶಾಂತ್ ಚೋಪ್ರಾ (5) ಅವರ ವಿಕೆಟ್ ಬೇಗನೇ ಪಡೆದರು. ಅವನೀಶ್ ಸುಧಾ (27) ಮತ್ತು ನಾಯಕ ಕುನಾಲ್ ಚಂದೇಲ (12) ಕ್ರಮವಾಗಿ ವೈಶಾಖ ವಿಜಯಕುಮಾರ್ ಮತ್ತು ಶ್ರೇಯಸ್ ಗೋಪಾಲ್ ಅವರ ಬೌಲಿಂಗ್ನಲ್ಲಿ ಔಟಾದರು. ಈ ಹಂತದಲ್ಲಿ ಸ್ಕೋರ್ 4 ವಿಕೆಟ್ಗೆ 81.

ಲಕ್ಷ್ಯ ರಾಯಚಂದಾನಿ ಜೊತೆಗೂಡಿದ ಕನ್ನಡಿಗ ಜಗದೀಶ ಸುಚಿತ್ (21) ಅವರು ಐದನೇ ವಿಕೆಟ್ಗೆ 43 ರನ್ ಸೇರಿಸಿದರು. ಆದರೆ ಸುಚಿತ್, ಪ್ರಸಿದ್ಧ ಕೃಷ್ಣ ಬೌಲಿಂಗ್ನಲ್ಲಿ ಸುಚಿತ್ ಬೌಲ್ಡ್ ಆಗುವ ಮೂಲಕ ಕರ್ನಾಟಕದ ಹಿಡಿತ ಇನ್ನಷ್ಟು ಬಿಗಿಯಾಯಿತು. ಲಕ್ಷ್ಯ 166 ಎಸೆತಗಳನ್ನು ಎದುರಿಸಿದ್ದು, 10 ಬೌಂಡರಿಗಳಿರುವ 52 ರನ್ ಗಳಿಸಿ ಆಟ ಉಳಿಸಿಕೊಂಡರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್: 194.4 ಓವರುಗಳಲ್ಲಿ 736 (ರವಿಚಂದ್ರನ್ ಸ್ಮರಣ್ 145, ವಿದ್ಯಾಧರ ಪಾಟೀಲ 54ಲ ಆದಿತ್ಯ ರಾವತ್ 154ಕ್ಕೆ 4, ಮಯಂಕ್ ಮಿಶ್ರಾ 173ಕ್ಕೆ3); ಉತ್ತರಾಖಂಡ: 69 ಓವರುಗಳಲ್ಲಿ 5 ವಿಕೆಟ್ಗೆ 149 (ಅವನೀಶ್ ಸುಧಾ 27, ಲಕ್ಷ್ಯ ರಾಯಚಂದಾನಿ ಔಟಾಗದೇ 52, ಜೆ.ಸುಚಿತ್ 21; ವಿದ್ಯಾಧರ ಪಾಟೀಲ ಔಟಾಗದೇ 52, ಪ್ರಸಿದ್ಧ ಕೃಷ್ಣ 42ಕ್ಕೆ1, ವೈಶಾಖ ವಿಜಯಕುಮಾರ್ 30ಕ್ಕೆ1, ಶ್ರೇಯಸ್ ಗೋಪಾಲ್ 23ಕ್ಕೆ1)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.