ಬೆಂಗಳೂರು: ಭಾರತದ ಅಗ್ರಮಾನ್ಯ ಸಿಂಗಲ್ಸ್ ಆಟಗಾರ್ತಿ ಸಹಜಾ ಯಮಲಪಲ್ಲಿ ಅವರು ಇಲ್ಲಿ ಮಂಗಳವಾರ ಆರಂಭವಾದ ಕೆಪಿಇ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್ ಟೆನಿಸ್ ಟೂರ್ನಿಯಲ್ಲಿ ಶುಭಾರಂಭ ಮಾಡಿದರು.

ಕಬ್ಬನ್ ಪಾರ್ಕ್ನ ಎಸ್.ಎಂ.ಕೃಷ್ಣ ಟೆನಿಸ್ ಕ್ರೀಡಾಂಗಣದ ಒಂದನೇ ಅಂಕಣದಲ್ಲಿ ನಡೆದ ಪಂದ್ಯದಲ್ಲಿ ಹೈದರಾಬಾದ್ನ ಸಹಜಾ ಅವರು ತನಗಿಂತ ಉನ್ನತ ಕ್ರಮಾಂಕದ ದಯೋನ್ ಬ್ಯಾಕ್ ಅವರನ್ನು 6-2, 1-6, 6-2ರಿಂದ ಹಿಮ್ಮೆಟ್ಟಿಸಿದರು. ದಯೋನ್ ವಿಶ್ವ ರ್ಯಾಂಕಿಂಗ್ನಲ್ಲಿ 306ನೇ ಸ್ಥಾನದಲ್ಲಿದ್ದಾರೆ.

ವಿಶ್ವ ಕ್ರಮಾಂಕದಲ್ಲಿ 416ನೇ ಸ್ಥಾನದಲ್ಲಿರುವ ಭಾರತದ ಆಟಗಾರ್ತಿ ಮೊದಲ ಸೆಟ್ನಲ್ಲಿ ಸುಲಭವಾಗಿ ಮೇಲುಗೈ ಸಾಧಿಸಿದರು. ಆದರೆ, ನಂತರದಲ್ಲಿ ತಿರುಗೇಟು ನೀಡಿದ ದಕ್ಷಿಣ ಕೊರಿಯಾದ ದಯೋನ್ ಸೆಟ್ ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ನಿರ್ಣಾಯಕ ಸೆಟ್ನಲ್ಲಿ ಚುರುಕಿನ ಆಟ ಪ್ರದರ್ಶಿಸಿದ ಸಹಜಾ ತವರಿನ ಪ್ರೇಕ್ಷಕರ ಮುಂದೆ ಗೆದ್ದು ಬೀಗಿದರು. ಈ ಪಂದ್ಯ ಎರಡು ಗಂಟೆ 18 ನಿಮಿಷ ನಡೆಯಿತು.

ವೈಲ್ಡ್ ಕಾರ್ಡ್ ಪ್ರವೇಶ ಪಡೆದ ಭಾರತದ ವೈಷ್ಣವಿ ಅಡ್ಕರ್ 6-1, 7-6 (6)ರಿಂದ ಸ್ವದೇಶದ ಶ್ರುತಿ ಅಹ್ಲಾವತ್ ಅವರನ್ನು ಸೋಲಿಸಿ ಮುಂದಿನ ಸುತ್ತಿಗೆ ಪ್ರವೇಶ ಪಡೆದರು. ಜಪಾನ್ನ ಮೈ ಹೊಂಟಾಮಾ 6-2, 6-1ರಿಂದ ಇಟಲಿಯ ಡಿಲೆಟ್ಟಾ ಚೆರುಬಿನಿ ವಿರುದ್ಧ ಗೆಲುವು ಸಾಧಿಸಿದರು.

ಮತ್ತೊಂದು ಸಿಂಗಲ್ಸ್ ಪಂದ್ಯದಲ್ಲಿ ರಷ್ಯಾದ ಎರಿಕಾ ಆಂಡ್ರೀವಾ 7-6 (12), 1-0 ಮುನ್ನಡೆಯಲ್ಲಿದ್ದಾಗ ಎದುರಾಳಿ ಅರ್ಜೆಂಟೀನಾದ ನಿಕೋಲ್ ಫೋಸಾ ಹುಯೆರ್ಗೊ ಅವರು ಸ್ಪರ್ಧೆಯಿಂದ ಹಿಂದೆ ಸರಿದರು. ಮೊದಲ ಸೆಟ್ ಅನ್ನು ಎರಿಕಾ ಟೈಬ್ರೇಕರ್ನಲ್ಲಿ ಗೆದ್ದಿದ್ದರು. ಎರಡನೇ ಸೆಟ್ನ ಆರಂಭದಲ್ಲೇ ಆರೋಗ್ಯ ಸಮಸ್ಯೆಯ ಕಾರಣಕ್ಕೆ ನಿಕೋಲ್ ನಿವೃತ್ತಿ ಪಡೆದ ಕಾರಣ ಎರಿಕಾ ಎರಡನೇ ಸುತ್ತಿಗೆ ಮುನ್ನಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.