ಭಾನುವಾರ, ಜೂನ್ 13, 2021
26 °C

ಮಧ್ಯಂತರ ಲಾಭಾಂಶ ಘೋಷಿಸಿದ ಬ್ರಿಟಾನಿಯಾ

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ತ್ವರಿತವಾಗಿ ಬಿಕರಿಯಾಗುವ ಗ್ರಾಹಕ ಬಳಕೆಯ ಉತ್ಪನ್ನ (ಎಫ್‌ಎಂಸಿಜಿ) ವಲಯದ ಪ್ರಮುಖ ಕಂಪನಿ ಬ್ರಿಟಾನಿಯಾ, ಪ್ರತಿ ಷೇರಿಗೆ ₹ 83ರಂತೆ ಮಧ್ಯಂತರ ಲಾಭಾಂಶ ಘೋಷಣೆ ಮಾಡಿದೆ.

ಸೋಮವಾರ ನಡೆದ ಕಂಪನಿಯ ನಿರ್ದೇಶಕರ ಮಂಡಳಿ ಸಭೆಯಲ್ಲಿ, 2020–21ನೇ ಹಣಕಾಸು ವರ್ಷಕ್ಕೆ ₹ 1ರ ಮುಖಬೆಲೆಯ ಪ್ರತಿ ಷೇರಿಗೆ ₹ 83ರಂತೆ ಮಧ್ಯಂತರ ಲಾಭಾಂಶ ನೀಡಲು ನಿರ್ಧರಿಸಲಾಗಿದೆ ಎಂದು ಷೇರುಪೇಟೆಗೆ ಮಾಹಿತಿ ನೀಡಿದೆ.

ಅಸುರಕ್ಷಿತ, ಪರಿವರ್ತಿಸಲಾಗದ, ಪುನಃ ಪಡೆಯಬಹುದಾದ ಸಾಲಪತ್ರಗಳನ್ನು ಬೋನಸ್‌ ರೂಪದಲ್ಲಿ ನೀಡಲು ಸಹ ಒಪ್ಪಿಗೆ ದೊರೆತಿದೆ ಎಂದು ಹೇಳಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.