ಮಂಗಳವಾರ, 16 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿವೈಡಿ ಇಂಡಿಯಾ: ರಾಜೀವ್‌ ಚೌಹಾಣ್‌ ನೇಮಕ

Published 8 ಜುಲೈ 2024, 14:21 IST
Last Updated 8 ಜುಲೈ 2024, 14:21 IST
ಅಕ್ಷರ ಗಾತ್ರ

ನವದೆಹಲಿ: ಬಿವೈಡಿ ಇಂಡಿಯಾದ ವಿದ್ಯುತ್‌ ಚಾಲಿತ ಪ್ರಯಾಣಿಕ ವಾಹನ ವಿಭಾಗದ ಉಪಾಧ್ಯಕ್ಷರಾಗಿ ರಾಜೀವ್‌ ಚೌಹಾಣ್‌ ಅವರನ್ನು ನೇಮಿಸಲಾಗಿದೆ ಎಂದು ವಾಹನ ತಯಾರಕ ಕಂಪನಿ ಬಿವೈಡಿ ಇಂಡಿಯಾ ಸೋಮವಾರ ತಿಳಿಸಿದೆ.

ನಿವೃತ್ತರಾಗುತ್ತಿರುವ ಸಂಜಯ್ ಗೋಪಾಲಕೃಷ್ಣನ್ ಅವರಿಂದ ಚೌಹಾಣ್‌ ಅಧಿಕಾರ ವಹಿಸಿಕೊಂಡರು. 

ಚೌಹಾಣ್‌, ಹೋಂಡಾ ಕಾರ್ಸ್‌ ಇಂಡಿಯಾ ಮತ್ತು ವೋಲ್ವೊ ಕಾರ್‌ ಇಂಡಿಯಾದಲ್ಲಿ ಈ ಮೊದಲು ಕೆಲಸ ಮಾಡಿದ್ದರು. ಬಿವೈಡಿ ಇಂಡಿಯಾದ ವಿದ್ಯುತ್‌ ಚಾಲಿತ ಪ್ರಯಾಣಿಕ ವಾಹನಗಳ ಒಟ್ಟಾರೆ ವ್ಯವಹಾರವನ್ನು ಚೌಹಾಣ್‌ ಮುನ್ನಡೆಸಲಿದ್ದಾರೆ ಎಂದು ಕಂಪನಿ ತಿಳಿಸಿದೆ.

Highlights - null

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT