ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಕಾಶ್‌ ಸ್ವಾಧೀನ: ಬಾಕಿ ಮೊತ್ತ ಪಾವತಿಸಿದ ಬೈಜುಸ್

Last Updated 24 ಸೆಪ್ಟೆಂಬರ್ 2022, 10:39 IST
ಅಕ್ಷರ ಗಾತ್ರ

ನವದೆಹಲಿ: ಆಕಾಶ್ ಎಜುಕೇಷನಲ್‌ ಸರ್ವೀಸಸ್‌ನ ಸ್ವಾಧೀನಕ್ಕೆ ಸಂಬಂಧಿಸಿದಂತೆಬೈಜುಸ್ ಕಂಪನಿಯು ಬ್ಲಾಕ್‌ಸ್ಟೋನ್‌ ಕಂಪನಿಗೆ ₹1,863 ಕೋಟಿ ಬಾಕಿ ಮೊತ್ತವನ್ನು ಪಾವತಿಸಿದೆ ಎಂದು ಮೂಲಗಳು ಹೇಳಿವೆ.

ಬೈಜುಸ್‌ ಕಂಪನಿಯು ಏಪ್ರಿಲ್‌ನಲ್ಲಿ ₹7,695 ಕೋಟಿಗೆ ಆಕಾಶ್ ಅನ್ನು ಸ್ವಾಧೀನಪಡಿಸಿಕೊಂಡಿತ್ತು. ಆಕಾಶ್‌ ಮತ್ತು ಬ್ಲಾಕ್‌ಸ್ಟೋನ್‌ನ ಪಾಲುದಾರರು ಆಕಾಶ್‌ ಕಂಪನಿಯಲ್ಲಿ ಸಣ್ಣ ಪ್ರಮಾಣದಲ್ಲಿ ಷೇರುಪಾಲು ಹೊಂದಿರಲಿದ್ದಾರೆ ಎಂದು ತಿಳಿಸಿವೆ.

2021ರ ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ಬೈಜುಸ್‌ನ ನಷ್ಟವು ₹4,588 ಕೋಟಿ ಆಗಿದೆ. ವರಮಾನವು ₹2,428 ಕೋಟಿಗೆ ಇಳಿಕೆ ಆಗಿದೆ. 2022ರ ಮಾರ್ಚ್‌ 31ಕ್ಕೆ ಕೊನೆಗೊಂಡ ಹಣಕಾಸು ವರ್ಷದಲ್ಲಿ ವರಮಾನವು ₹10 ಸಾವಿರ ಕೋಟಿಗೆ ತಲುಪಿದೆ ಎಂದು ಕಂಪನಿ ಹೇಳಿದೆ. ಆದರೆ, ಲಾಭ ಅಥವಾ ನಷ್ಟದ ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT