ಭಾನುವಾರ, 13 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

‘ಪಿಎಂ–ಆಶಾ’ ಮುಂದುವರಿಕೆಗೆ ಕೇಂದ್ರ ಸಚಿವ ಅಸ್ತು

Published : 18 ಸೆಪ್ಟೆಂಬರ್ 2024, 23:30 IST
Last Updated : 18 ಸೆಪ್ಟೆಂಬರ್ 2024, 23:30 IST
ಫಾಲೋ ಮಾಡಿ
Comments

ನವದೆಹಲಿ: ಕೃಷಿ ಹುಟ್ಟುವಳಿಗೆ ಉತ್ತಮ ಬೆಲೆ ನೀಡುವ ನಿಟ್ಟಿನಲ್ಲಿ  ಪ್ರಧಾನ ಮಂತ್ರಿ ಅನ್ನದಾತ ಆಯ್ ಸಂರಕ್ಷಣಾ ಅಭಿಯಾನ (ಪಿಎಂ–ಆಶಾ) ಮುಂದುವರಿಕೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ. 

ಇದಕ್ಕಾಗಿ ₹35 ಸಾವಿರ ಕೋಟಿ ನೀಡಲಿದೆ. ಅಗತ್ಯ ಸರಕುಗಳ ಬೆಲೆ ಏರಿಕೆ ನಿಯಂತ್ರಿಸುವುದು ಕೂಡ ಯೋಜನೆಯ ಮುಖ್ಯ ಉದ್ದೇಶವಾಗಿದೆ. 2025–26ನೇ ಆರ್ಥಿಕ ವರ್ಷದವರೆಗೂ ಯೋಜನೆಯು ಮುಂದುವರಿಯಲಿದೆ.

ರಸಗೊಬ್ಬರಕ್ಕೆ ₹24,475 ಕೋಟಿ ಸಬ್ಸಿಡಿ: 

ಹಿಂಗಾರು ಅವಧಿಗೆ ಫಾಸ್ಪೇಟಿಕ್‌ ಮತ್ತು ಪೊಟ್ಯಾಸಿಕ್‌ (ಪಿ ಆ್ಯಂಡ್‌ ಕೆ) ರಸಗೊಬ್ಬರಗಳಿಗೆ ₹24,475 ಕೋಟಿ ಸಬ್ಸಿಡಿ ನೀಡಲು ಸಂಪುಟ ಒಪ್ಪಿಗೆ ನೀಡಿದೆ.

ರೈತರಿಗೆ ಬೆಳೆ ಪೋಷಕಾಂಶಗಳನ್ನು ಕೈಗೆಟುಕುವ ದರದಲ್ಲಿ ಒದಗಿಸಲು ಪೋಷಕಾಂಶ ಆಧಾರಿತ ಸಬ್ಸಿಡಿ (ಎನ್‌ಬಿಎಸ್‌) ಅಡಿ ಈ ನಿರ್ಧಾರ ಕೈಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT