ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಎಥೆನಾಲ್ ಬೆಲೆ ಹೆಚ್ಚಳಕ್ಕೆ ಕೇಂದ್ರ ಒಪ್ಪಿಗೆ

Last Updated 10 ನವೆಂಬರ್ 2021, 16:18 IST
ಅಕ್ಷರ ಗಾತ್ರ

ನವದೆಹಲಿ: ಕಬ್ಬಿನಿಂದ ತಯಾರಿಸಲಾದ, ಪೆಟ್ರೋಲ್‌ನಲ್ಲಿ ಬೆರೆಸುವ ಎಥೆನಾಲ್ ಬೆಲೆಯನ್ನು ಕೇಂದ್ರ ಸಚಿವ ಸಂಪುಟವು ಲೀಟರಿಗೆ ₹ 1.47ರವರೆಗೆ ಹೆಚ್ಚಿಸಿದೆ. ಇದು ಡಿಸೆಂಬರ್‌ನಿಂದ ಶುರುವಾಗಲಿರುವ 2021–22ನೇ ಸಾಲಿನ ಮಾರುಕಟ್ಟೆ ವರ್ಷಕ್ಕೆ ಅನ್ವಯವಾಗಲಿದೆ.

ಎಥೆನಾಲ್‌ ಅನ್ನು ಪೆಟ್ರೋಲ್‌ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಿಶ್ರಣ ಮಾಡುವುದರಿಂದಾಗಿ ದೇಶಕ್ಕೆ ಪೆಟ್ರೋಲಿಯಂ ಆಮದು ವೆಚ್ಚ ತಗ್ಗಿಸಲು ಸಹಾಯ ಆಗುತ್ತದೆ. ಅಲ್ಲದೆ, ಕಬ್ಬು ಬೆಳೆಗಾರರಿಗೆ, ಸಕ್ಕರೆ ಕಾರ್ಖಾನೆಗಳಿಗೆ ಕೂಡ ಇದರಿಂದ ಸಹಾಯ ಆಗಲಿದೆ.

ತೈಲ ಮಾರಾಟ ಕಂಪನಿಗಳು ಕೇಂದ್ರ ಸರ್ಕಾರ ನಿಗದಿ ಮಾಡಿದ ಬೆಲೆಗೆ ಎಥೆನಾಲ್‌ ಖರೀದಿಸುತ್ತವೆ. 2025ರ ವೇಳೆಗೆ ಪೆಟ್ರೋಲ್‌ನಲ್ಲಿ ಶೇ 20ರಷ್ಟು ಎಥೆನಾಲ್ ಮಿಶ್ರಣ ಮಾಡುವುದು ಕೇಂದ್ರದ ಗುರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT