ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೆಮಿಕಂಡಕ್ಟರ್ ವಲಯ: ₹ 76 ಸಾವಿರ ಕೋಟಿ ನೆರವಿಗೆ ಸಂಪುಟ ಅನುಮತಿ

Last Updated 15 ಡಿಸೆಂಬರ್ 2021, 14:27 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸೆಮಿಕಂಡಕ್ಟರ್ ಮತ್ತು ಡಿಸ್‌ಪ್ಲೆ ತಯಾರಿಕೆ ಉದ್ಯಮಕ್ಕೆ ನೆರವು ನೀಡುವ ಉದ್ದೇಶದಿಂದ ₹ 76 ಸಾವಿರ ಕೋಟಿ ಮೌಲ್ಯದ ಯೋಜನೆಯನ್ನು ಕೇಂದ್ರ ಸರ್ಕಾರ ಬುಧವಾರ ಪ್ರಕಟಿಸಿದೆ. ಸೆಮಿಕಂಡಕ್ಟರ್‌ಗಳಿಗೆ ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಕೊರತೆಯ ನಡುವೆ ಕೇಂದ್ರವು ಈ ಕ್ರಮ ಕೈಗೊಂಡಿದೆ.

ಕೇಂದ್ರ ಸಚಿವ ಸಂಪುಟದ ತೀರ್ಮಾನವನ್ನು ಐ.ಟಿ. ಮತ್ತು ದೂರಸಂಪರ್ಕ ಸಚಿವ ಅಶ್ವಿನಿ ವೈಷ್ಣವ್ಪ್ರಕಟಿಸಿದರು. ಈ ಯೋಜನೆಯು ಸೆಮಿಕಂಡಕ್ಟರ್ ಹಾಗೂ ಡಿಸ್‌ಪ್ಲೆ ತಯಾರಿಕಾ ಕಂಪನಿಗಳಿಗೆ ಜಾಗತಿಕ ಮಟ್ಟದ ಉತ್ತೇಜನ ಪ್ಯಾಕೇಜ್‌ಗಳನ್ನು ನೀಡಲಿದೆ. ಇವುಗಳ ಉತ್ಪಾದನೆಗೆ ಬಂಡವಾಳದ ನೆರವು ಹಾಗೂ ತಾಂತ್ರಿಕ ಸಹಭಾಗಿತ್ವಕ್ಕೆ ಈ ಯೋಜನೆಯು ಒತ್ತು ನೀಡಲಿದೆ.

ಸಿಲಿಕಾನ್ ಸೆಮಿಕಂಡಕ್ಟರ್‌, ಡಿಸ್‌ಪ್ಲೆ ಉಪಕರಣ ತಯಾರಿಕೆ, ಸೆಮಿಕಂಡಕ್ಟರ್ ವಿನ್ಯಾಸದಂತಹ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಕಂಪನಿಗಳಿಗೆ ಸರ್ಕಾರವು ಉತ್ತೇಜನ ನೀಡಲಿದೆ. ಭಾರತದಲ್ಲಿ ಸೆಮಿಕಂಡಕ್ಟರ್ ಮತ್ತು ಡಿಸ್‌ಪ್ಲೆ ತಯಾರಿಕಾ ಘಟಕಗಳನ್ನು ಆರಂಭಿಸುವ ಅರ್ಹ ಅರ್ಜಿದಾರರಿಗೆ ಈ ಯೋಜನೆಯ ಅಡಿಯಲ್ಲಿ ಯೋಜನಾ ವೆಚ್ಚದ ಶೇಕಡ 50ರವರೆಗೆ ನೆರವು ಸಿಗಲಿದೆ.

‘ಸೆಮಿಕಂಡಕ್ಟರ್ ವಿನ್ಯಾಸ ಕ್ಷೇತ್ರದ 100 ದೇಶಿ ಕಂಪನಿಗಳಿಗೆ ಪ್ರೋತ್ಸಾಹ ನೀಡಲಾಗುತ್ತದೆ’ ಎಂದು ಪ್ರಕಟಣೆ ತಿಳಿಸಿದೆ. ಭಾರತವನ್ನು ಎಲೆಕ್ಟ್ರಾನಿಕ್ ಉಪಕರಣಗಳ ತಯಾರಿಕೆಯಲ್ಲಿ ಜಾಗತಿಕ ಕೇಂದ್ರವನ್ನಾಗಿ ಬೆಳೆಸಲು ಕೇಂದ್ರವು ಒಟ್ಟು ₹ 2.30 ಲಕ್ಷ ಕೋಟಿ ಮೊತ್ತದ ಕಾರ್ಯಕ್ರಮ ರೂಪಿಸಿದೆ.

ಇನ್ನು ಆರರಿಂದ ಎಂಟು ತಿಂಗಳ ಅವಧಿಯಲ್ಲಿ ಸೆಮಿಕಂಡಕ್ಟರ್ ಕೊರತೆಯು ಸರಿಹೋಗಲಿದೆ ಎಂದು ಉದ್ಯಮ ವಲಯ ಹೇಳುತ್ತಿದೆ ಎಂದು ವೈಷ್ಣವ್ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT