ಬುಧವಾರ, 29 ನವೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಸ್ತಿ ನಗದೀಕರಣಕ್ಕೆ ಪ್ರತ್ಯೇಕ ಕಂಪನಿ: ಸಂಪುಟ ಅನುಮತಿ

Last Updated 9 ಮಾರ್ಚ್ 2022, 15:45 IST
ಅಕ್ಷರ ಗಾತ್ರ

ನವದೆಹಲಿ: ಖಾಸಗಿಯವರಿಗೆ ಮಾರಾಟ ಆಗಲಿರುವ ಅಥವಾ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಕಂಪನಿಗಳು ಹಾಗೂ ಏಜೆನ್ಸಿಗಳ ಹೆಚ್ಚುವರಿ ಜಮೀನು ಮತ್ತು ಕಟ್ಟಡಗಳ ನಗದೀಕರಣಕ್ಕೆ ರಾಷ್ಟ್ರೀಯ ಜಮೀನು ನಗದೀಕರಣ ಕಾರ್ಪೊರೇಷನ್‌ (ಎನ್‌ಎಲ್‌ಎಂಸಿ) ಆರಂಭಿಸಲು ಕೇಂದ್ರ ಸಚಿವ ಸಂಪುಟವು ಬುಧವಾರ ಒಪ್ಪಿಗೆ ನೀಡಿದೆ.

ಎನ್‌ಎಲ್‌ಎಂಸಿಯನ್ನು ಕೇಂದ್ರ ಸರ್ಕಾರಿ ಸ್ವಾಮ್ಯದ ಕಂಪನಿಯನ್ನಾಗಿ ಆರಂಭಿಸಲಾಗುತ್ತದೆ. ಇದು ಕೇಂದ್ರ ಸರ್ಕಾರದ ಒಡೆತನದ ಉದ್ಯಮಗಳ ಬಳಿಯಿರುವ ಹೆಚ್ಚುವರಿ ಜಮೀನು ಮತ್ತು ಕಟ್ಟಡಗಳ ನಗದೀಕರಣದ ಹೊಣೆ ಹೊತ್ತುಕೊಳ್ಳುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಮುಖವಲ್ಲದ ಆಸ್ತಿಗಳ ನಗದೀಕರಣದ ಮೂಲಕ ಸರ್ಕಾರಕ್ಕೆ ಗಣನೀಯ ಪ್ರಮಾಣದ ವರಮಾನ ಸಂಗ್ರಹಿಸಲು ಸಾಧ್ಯವಾಗುತ್ತದೆ ಎಂದು ಕೂಡ ಪ್ರಕಟಣೆಯಲ್ಲಿ ಹೇಳಲಾಗಿದೆ. ‘ಕೇಂದ್ರ ಸರ್ಕಾರದ ಉದ್ಯಮಗಳ ಬಳಿ ಹೆಚ್ಚುವರಿಯಾಗಿ, ಬಳಕೆಯಲ್ಲಿ ಇಲ್ಲದ ಜಮೀನು ಮತ್ತು ಕಟ್ಟಡಗಳು ಬಹಳ ಇವೆ. ಖಾಸಗಿಯವರಿಗೆ ಮಾರಾಟ ಆಗಲಿರುವ ಮತ್ತು ಸ್ಥಗಿತಗೊಳ್ಳಲಿರುವ ಕೇಂದ್ರೋದ್ಯಮಗಳ ಇಂತಹ ಆಸ್ತಿಗಳನ್ನು ನಗದೀಕರಣಕ್ಕೆ ಬಳಸಿಕೊಂಡರೆ, ಆ ಉದ್ಯಮಗಳ ಮೌಲ್ಯ ಹೆಚ್ಚಳಕ್ಕೆ ನೆರವಾಗುತ್ತದೆ’ ಎಂದು ಕೂಡ ಅದು ಹೇಳಿದೆ.

ಸಮರ್ಪಕವಾಗಿ ಬಳಕೆಯಾಗದ ಆಸ್ತಿಗಳನ್ನು ಒಳ್ಳೆಯ ರೀತಿಯಲ್ಲಿ ಬಳಸಿಕೊಳ್ಳಲು ಇದರಿಂದ ಸಾಧ್ಯವಾಗುತ್ತದೆ. ಇದರಿಂದಾಗಿ ಖಾಸಗಿ ವಲಯದಿಂದ ಹೂಡಿಕೆಗೆ ಉತ್ತೇಜನ ನೀಡಿದಂತೆ ಆಗುತ್ತದೆ. ಹೊಸ ಆರ್ಥಿಕ ಚಟುವಟಿಕೆಗಳು ಶುರುವಾಗುತ್ತವೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT