ಮುಂಬೈ: ಫ್ರಾನ್ಸ್‌ನ ತಂತ್ರಜ್ಞಾನ ಕಂಪನಿ ಕ್ಯಾಪ್‌ಜೆಮಿನಿ, ಭಾರತದಲ್ಲಿ ಈ ವರ್ಷ 30 ಸಾವಿರ ಸಿಬ್ಬಂದಿಯನ್ನು ನೇಮಿಸಿಕೊಳ್ಳುವುದಾಗಿ ತಿಳಿಸಿದೆ.

ಭಾರತದಲ್ಲಿ ತನ್ನ ವಹಿವಾಟು ವಿಸ್ತರಣೆಯ ಉದ್ದೇಶದಿಂದ ಈ ನೇಮಕಾತಿಗೆ ಮುಂದಾಗಿದೆ. ಸದ್ಯ ಭಾರತದಲ್ಲಿ 1.15 ಲಕ್ಷ ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಇದು ಕಂಪನಿಯು ಜಾಗತಿಕ ಮಟ್ಟದಲ್ಲಿ ಹೊಂದಿರುವ ಸಿಬ್ಬಂದಿಯ ಅರ್ಧಕ್ಕಿಂತಲೂ ಹೆಚ್ಚಿನದ್ದಾಗಿದೆ.

‘ಹೊಸಬರು ಮತ್ತು ಅನುಭವಿ ವೃತ್ತಿಪರರನ್ನು ನೇಮಿಸಿಕೊಳ್ಳಲಾಗುವುದು’ ಎಂದು ಕಂಪನಿಯ ಭಾರತದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಶ್ವಿನ್ ಯಾರ್ಡಿ ತಿಳಿಸಿದ್ದಾರೆ.

‘ಭವಿಷ್ಯದ ತಂತ್ರಜ್ಞಾನಕ್ಕೆ ಅನುಗುಣವಾಗಿ ಸಿಬ್ಬಂದಿಯ ಕೌಶಲದಲ್ಲಿ ಸುಧಾರಣೆ ತರುವುದರ ಬಗ್ಗೆ ಕಂಪನಿಯು ಸದ್ಯಕ್ಕೆ ಹೆಚ್ಚಿನ ಗಮನ ನಿಡುತ್ತಿದೆ. ಇದೊಂದು ನಿರಂತರ ಪ್ರಕ್ರಿಯೆಯಾಗಿದೆ’ ಎಂದೂ ಅವರು ಹೇಳಿದ್ದಾರೆ.

‘30 ವಯಸ್ಸಿನ ಒಳಗಿನ ಸಿಬ್ಬಂದಿಯಲ್ಲಿ ಶೇ 65ರಷ್ಟು ಮಂದಿ ಕಲಿಕೆಗೆ ಹೆಚ್ಚಿನ ಉತ್ಸಾಹ ತೋರಿಸುತ್ತಿದ್ದಾರೆ. 10–15 ವರ್ಷಗಳ ಅನುಭವ ಇರುವ ಮಧ್ಯಮ ಹಂತದ ವ್ಯವಸ್ಥಾಪಕರಿಗೆ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಪ್ರಾಜೆಕ್ಟ್ ಮ್ಯಾನೇಜರ್ಸ್ ಅಥವಾ ಆರ್ಕಿಟೆಕ್ಟ್ ಆಗಿ ನೇಮಿಸಲಾಗುವುದು.

‘ಕಾರ್ಯನಿರ್ವಹಣಾ ಸಾಮರ್ಥ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಹೊರತಾಗಿ, ಯಾವುದೇ ಕಾರಣಕ್ಕೂ ಸಿಬ್ಬಂದಿ ಕಡಿತ ಮಾಡುವುದಿಲ್ಲ ಅಥವಾ ಹೊಣೆಗಾರಿಕೆಯಲ್ಲಿ ಬದಲಾವಣೆ ಮಾಡುವುದಿಲ್ಲ‘ ಎಂದೂ ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.