ನವದೆಹಲಿ: ಜಿಎಸ್ಟಿ ನೋಂದಣಿಯಲ್ಲಿ ವಿಳಂಬ ಹಾಗೂ ನೋಂದಣಿ ಸಂಖ್ಯೆ ನೀಡಲು ಲಂಚ ನೀಡಬೇಕಿದೆ ಎಂಬ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಕೇಂದ್ರ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಸ್ಪಷ್ಟನೆ ನೀಡಿದೆ.

ಜಿಎಸ್ಟಿ ನೋಂದಣಿಗೆ ಅರ್ಜಿ ಸಲ್ಲಿಸಿ 20 ದಿನಗಳು ಕಳೆದಿವೆ. ಇನ್ನೂ ಪರವಾನಗಿ ನೀಡಿಲ್ಲ ಎಂದು ವೃತ್ತಿಪರರ ಜಾಲತಾಣವಾದ ಲಿಂಕ್ಡ್ಇನ್ನಲ್ಲಿ ವ್ಯಕ್ತಿಯೊಬ್ಬರು ಅಭಿಪ್ರಾಯ ಹಂಚಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಮತ್ತೊಬ್ಬರು, ಸರಕು ಮತ್ತು ಸೇವಾ ತೆರಿಗೆ ನೋಂದಣಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಆರೋಪಿಸಿದ್ದರು. ಈ ವಿಷಯವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

‘ಮೇ 26ರಂದು ಜಿಎಸ್ಟಿ ನೋಂದಣಿ ಕೋರಿ ವ್ಯಕ್ತಿಯೊಬ್ಬರು ಅರ್ಜಿ ಸಲ್ಲಿಸಿದ್ದಾರೆ. ಈ ಬಗ್ಗೆ ಪರಿಶೀಲನೆ ನಡೆಸಲು ದೆಹಲಿಯ ಜಿಎಸ್ಟಿ ವಿಭಾಗಕ್ಕೆ ಅರ್ಜಿಯನ್ನು ವರ್ಗಾಯಿಸಲಾಗಿದೆ. ಇದರಲ್ಲಿ ಮಂಡಳಿಯ ಪಾತ್ರ ಇರುವುದಿಲ್ಲ’ ಎಂದು ಸಿಬಿಐಸಿ ‘ಎಕ್ಸ್’ನಲ್ಲಿ ತಿಳಿಸಿದೆ.

ವ್ಯಕ್ತಿಯೊಬ್ಬರು ಸಲ್ಲಿಸಿರುವ ಅರ್ಜಿಯಲ್ಲಿ ಅವರ ಹುದ್ದೆ ನಮೂದಾಗಿಲ್ಲ. ಕಂಪನಿಯ ಪರವಾಗಿ ಈ ವ್ಯಕ್ತಿಯು ಬಾಡಿಗೆ ಒಪ್ಪಂದ ಪತ್ರಕ್ಕೆ ಸಹಿ ಹಾಕಿದ್ದಾರೆ. ಈ ಬಗ್ಗೆ ಅಧಿಕಾರಿಗಳು ತಕರಾರು ಎತ್ತಿದ್ದಾರೆ. ಹಾಗಾಗಿ, ಅರ್ಜಿ ಇತ್ಯರ್ಥಗೊಂಡಿಲ್ಲ. ಅರ್ಜಿದಾರರಿಗೆ ಈ ಕುರಿತು ಮಾಹಿತಿ ನೀಡಲಾಗಿದೆ ಎಂದು ಹೇಳಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.