ಸೋಮವಾರ, ಏಪ್ರಿಲ್ 19, 2021
31 °C

ಬ್ಯಾಡಗಿ ಮೆಣಸಿನಕಾಯಿ ಆವಕದಲ್ಲಿ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ಇಲ್ಲಿಯ ಅಂತರರಾಷ್ಟ್ರೀಯ ಮಾರುಕಟ್ಟೆಗೆ ಸೋಮವಾರ 2.60 ಲಕ್ಷ ಚೀಲ (64,878 ಕ್ವಿಂಟಲ್‌) ಮೆಣಸಿನಕಾಯಿ ಮಾರಾಟಕ್ಕೆ ತರಲಾಗಿದ್ದು, ಪ್ರಸಕ್ತ ಹಂಗಾಮಿನಲ್ಲಿ 9ನೇ ಬಾರಿಗೆ ಒಂದೇ ದಿನದಲ್ಲಿ ಎರಡು ಲಕ್ಷಕ್ಕಿಂತ ಹೆಚ್ಚು ಚೀಲ ಆವಕವಾದಂತಾಗಿದೆ.

ಡಬ್ಬಿ ಮೆಣಸಿನಕಾಯಿ ಪ್ರತಿ ಕ್ವಿಂಟಲ್‌ಗೆ ₹27,786ರಂತೆ ಮಾರಾಟವಾಗಿದ್ದು, ಕಳೆದ ವಾರ ಕ್ವಿಂಟಲ್‌ಗೆ ₹32,999ರಂತೆ ಮಾರಾಟವಾಗಿತ್ತು. ಪ್ರತಿ ಕ್ವಿಂಟಲ್ ಕಡ್ಡಿ ಮೆಣಸಿನಕಾಯಿಗೆ ₹1,700 ಹಾಗೂ ಡಬ್ಬಿ ಮೆಣಸಿನಕಾಯಿಗೆ ಗರಿಷ್ಠ ಬೆಲೆಯಲ್ಲಿ ₹5,000 ಇಳಿಕೆಯಾಗಿದೆ. ಗುಂಟೂರು ತಳಿ ಮೆಣಸಿನಕಾಯಿ ಕನಿಷ್ಠ ಹಾಗೂ ಗರಿಷ್ಠ ಬೆಲೆಯಲ್ಲಿ ಸ್ಥಿರತೆ ಕಾಯ್ದುಕೊಂಡಿದೆ. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು