ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿದ್ಯುತ್‌ ಖರೀದಿಗೆ ಕ್ಲೀನ್‍ಮ್ಯಾಕ್ಸ್–ಬಿಐಎಎಲ್ ಒಪ್ಪಂದ

Published 26 ಫೆಬ್ರುವರಿ 2024, 9:46 IST
Last Updated 26 ಫೆಬ್ರುವರಿ 2024, 9:46 IST
ಅಕ್ಷರ ಗಾತ್ರ

ಬೆಂಗಳೂರು: ಏಷ್ಯಾದಲ್ಲಿ ಮುಂಚೂಣಿಯಲ್ಲಿ ಇರುವ ಸಿ ಆ್ಯಂಡ್‌ ಐ ನವೀಕರಿಸಬಹುದಾದ ಇಂಧನ ಮೂಲಗಳ ಸಂಸ್ಥೆಯಾದ ಕ್ಲೀನ್‍ಮ್ಯಾಕ್ಸ್ ಎನ್ವಿರೋ ಎನರ್ಜಿ ಸಲ್ಯೂಷನ್ಸ್ ಮತ್ತು ಬೆಂಗಳೂರು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವು (ಬಿಐಎಎಲ್) 25 ವರ್ಷಗಳ ದೀರ್ಘಾವಧಿಯ ವಿದ್ಯುತ್ ಖರೀದಿ ಒಪ್ಪಂದಕ್ಕೆ ಇತ್ತೀಚೆಗೆ ಸಹಿ ಹಾಕಿವೆ.

ಕ್ಲೀನ್‍ಮ್ಯಾಕ್ಸ್– ಬಿಐಎಎಲ್ ರಿನ್ಯೂಯೆಬಲ್ ಎನರ್ಜಿ ಪ್ರೈವೇಟ್ ಲಿಮಿಟೆಡ್ ಹೆಸರಿನ ಎಸ್‍ಪಿವಿ ಅಡಿಯಲ್ಲಿ 45.9 ಮೆಗಾವಾಟ್ ಸೌರ ಮತ್ತು ಪವನ ವಿದ್ಯುತ್‌ ಖರೀದಿಸಲಾಗುತ್ತದೆ.  

ರಾಜ್ಯದ ಜಗಳೂರಿನಲ್ಲಿ ಕ್ಲೀನ್‍ಮ್ಯಾಕ್ಸ್‌ ಒಡೆತನದ ಸೌರ ಮತ್ತು ಪವನ ವಿದ್ಯುತ್ ಉತ್ಪಾದನಾ ಘಟಕವಿದೆ. ಈ ಯೋಜನೆಯಡಿ 36 ಎಂಡಬ್ಲ್ಯುಪಿ ಸೌರ ಮತ್ತು 9.9 ಮೆಗಾವಾಟ್ ಪವನ ವಿದ್ಯುತ್ ಪೂರೈಸಲಾಗುತ್ತದೆ.  

‘ಬಿಐಎಎಲ್‌ ಸಂಸ್ಥೆಯು ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಕಾರ್ಯಾಚರಣೆ ನಡೆಸುವ ಸಂಸ್ಥೆಯಾಗಿದೆ. ಗ್ರಾಹಕರು ಮಾತ್ರವಲ್ಲದೆ ಪಾಲುದಾರರ ಹಿತ ಕಾಪಾಡಲು ಬದ್ಧವಾಗಿದೆ. ಸಮುದಾಯ ಮತ್ತು ಪರಿಸರಕ್ಕೆ ಕೊಡುಗೆ ನೀಡಲು ಶ್ರಮಿಸಲಿದೆ’ ಎಂದು ಬಿಐಎಎಲ್‍ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಹರಿ ಮಾರರ್ ಹೇಳಿದ್ದಾರೆ.

ಕ್ಲೀನ್‍ಮ್ಯಾಕ್ಸ್ ಎನ್ವಿರೊ ಎನರ್ಜಿ ಸಲ್ಯೂಷನ್ಸ್ ಪ್ರೈವೇಟ್ ಲಿಮಿಟೆಡ್‍ನ ಸ್ಥಾಪಕ ಮತ್ತು ವ್ಯವಸ್ಥಾಪಕ ನಿರ್ದೇಶಕ ಕುಲ್‍ದೀಪ್ ಜೈನ್, ‘ಬಿಐಎಎಲ್‍ ಸಹಭಾಗಿತ್ವದಡಿ ಸುಸ್ಥಿರ ಭವಿಷ್ಯವನ್ನು ರೂಪಿಸುವ ಕಡೆಗೆ ಕಂಪನಿಯ ಪ್ರಯತ್ನ ಮುಂದುವರಿದಿದೆ’ ಎಂದು ಹೇಳಿದ್ದಾರೆ.

2011ರಲ್ಲಿ ಕಂಪನಿಯು ಸ್ಥಾಪನೆಯಾಗಿದೆ. ಅಂದಿನಿಂದ ನವೀಕರಿಸಬಹುದಾದ ಇಂಧನಗಳ ಸುಸ್ಥಿರತೆಗೆ ಒತ್ತು ನೀಡಿದೆ. ಜಗಳೂರಿನಲ್ಲಿ ಇರುವ ಪವನ ಮತ್ತು ಸೌರ ವಿದ್ಯುತ್‌ ಘಟಕವು 290 ಮೆಗಾವಾಟ್‍ ಸಾಮರ್ಥ್ಯ ಹೊಂದಿದೆ. ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಶಕ್ತಿ ಕೇಂದ್ರವಾಗಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT