ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾಚ್ಯುಟಿ ಸಿಗಲು ಕಂಪನಿಯೊಂದರಲ್ಲಿ ಎಷ್ಟು ವರ್ಷ ಕೆಲಸ ಮಾಡಿರಬೇಕು?

Last Updated 27 ನವೆಂಬರ್ 2018, 20:00 IST
ಅಕ್ಷರ ಗಾತ್ರ

- ಸರಳಾ ಸಾತ್‌ಪುತೆ ಬೆಂಗಳೂರು

ಒಂದು ಕಂಪನಿಯಲ್ಲಿ 4 ವರ್ಷ 6 ತಿಂಗಳಿನಿಂದ ಕೆಲಸ ಮಾಡುತ್ತಿದ್ದು, ಈಗ ರಾಜೀನಾಮೆ ನೀಡಿದರೆ ಗ್ರಾಚ್ಯುಟಿ ಸಿಗಬಹುದೆ?

ಉತ್ತರ: ನೀವು ಒಂದು ಕಂಪನಿ ಬಿಟ್ಟು ಇನ್ನೊಂದು ಕಂಪನಿ ಸೇರುವುದಾದಲ್ಲಿ ಮಾತ್ರ ರಾಜೀನಾಮೆ ಕೊಡುವುದು ಲೇಸು. ಸದ್ಯದ ಪರಿಸ್ಥಿತಿಯಲ್ಲಿ ಮತ್ತೆ ಕೆಲಸ ಬೇಕೆಂದರೆ ಸಿಗಲಾರದು. Industrial dispute act ಹಾಗೂ Payment of Gratuity Act ಪ್ರಕಾರ ಓರ್ವ ವ್ಯಕ್ತಿ 4 ವರ್ಷ 10 ತಿಂಗಳು 11 ದಿನ ಕೆಲಸ ಮಾಡಿದ್ದರೆ ಈ ಅವಧಿ 5 ವರ್ಷಗಳೆಂದು ಪರಿಗಣಿಸಿ ಸೆಕ್ಷನ್‌ 4(2) ಆಧಾರದ ಮೇಲೆ ಗ್ರಾಚ್ಯುಟಿ ಪಡೆಯಬಹುದು. Surendra Kumar vs Central Govt, Industrial Tribunal (1080) (4) S.C.C 433 Supreme court Judgment ಕೂಡಾ ಇದನ್ನೇ ಹೇಳುತ್ತದೆ. ಆದರೆ, ನೀವು 5 ವರ್ಷ ಸೇವೆ ಸಲ್ಲಿಸುವುದೇ ಲೇಸು.

– ಮಧುಕರ ಚಿಪ್ಲಿ, ಗದಗ

ನೀವು ₹ 40 ಸಾವಿರ Standard Deduction ಪಿಂಚಣಿದಾರರಿಗೆ ಈ ಆರ್ಥಿಕ ವರ್ಷದಿಂದ ಲಭಿಸಿರುವುದಾಗಿ ಸತ್ಯನಾರಾಯಣ ಅವರ ಪ್ರಶ್ನೆಗೆ ಉತ್ತರಿಸಿದ್ದೀರಿ. ಈ ಸವಲತ್ತು, ಸಂಬಳ ಪಡೆಯುವವರಿಗೂ ದೊರೆಯುವುದೇ?

ಉತ್ತರ: ಓರ್ವ ನೌಕರ, ತನ್ನ ಸಂಬಳದಲ್ಲಿ Transport ಹಾಗೂ Medical Reimbursement Allowance ಪಡೆದಿರುವಲ್ಲಿ ಮಾತ್ರ ಅಂತಹ ನೌಕರರು Standard Deduction ₹ 40 ಸಾವಿರವನ್ನು ಈ ಆರ್ಥಿಕ ವರ್ಷದಿಂದ ಪಡೆಯಬಹುದಾಗಿದೆ.

Deduction of ₹ 40,000 in place of Existing 19,200 for Transport and 15,000 for Medical Reimbursement is allowed as stranded deduction for all salaried class.

ವಿಜಯ ಕುಲಕರ್ಣಿ, ಬೆಳಗಾವಿ

ನಾನು ಬ್ಯಾಂಕ್‌ನಿಂದ ಗೃಹ ಸಾಲ ಪಡೆದಿದ್ದೇನೆ. ಮನೆ ಪೂರ್ಣಗೊಳ್ಳಲಿಲ್ಲವಾದರೂ ಬ್ಯಾಂಕ್‌ನಲ್ಲಿ ಸಾಲದ ಕಂತು ಬಡ್ಡಿ ಮುರಿಯಲು ಪ್ರಾರಂಭಿಸಿದ್ದಾರೆ. ನಾನು ಬಡ್ಡಿಯಲ್ಲಿ ತೆರಿಗೆ ವಿನಾಯ್ತಿ ಪಡೆಯಬಹುದೇ?

ಉತ್ತರ: ಸೆಕ್ಷನ್‌ 80 ಸಿ ಆಧಾರದ ಮೇಲೆ ಅಸಲಿಗೆ ತುಂಬಿದ ಸಾಲದ ಕಂತುಗಳ ಮೇಲೆ ಮನೆ ಪೂರ್ಣಗೊಳ್ಳುವ ಮೊದಲು ತೆರಿಗೆ ವಿನಾಯ್ತಿ ಪಡೆಯವಂತಿಲ್ಲ. ಸೆಕ್ಷನ್‌ 24 (ಬಿ) ಆಧಾರದ ಮೇಲೆ, ಸಾಲದ ಬಡ್ಡಿ ಮನೆ ಪೂರ್ಣಗೊಳ್ಳುವ ಮೊದಲು ಕಟ್ಟಿರುವ ಮೊತ್ತ 5 ಸಮಾನ ಕಂತುಗಳಲ್ಲಿ ಮುಂದಿನ 5 ವರ್ಷ ಐ.ಟಿ ರಿಟರ್ನ್‌ ತುಂಬುವಾಗ ವಿನಾಯ್ತಿ ಪಡೆಯಬಹುದು.

– ಹೆಸರು ಬೇಡ

ಅನುದಾನಿತಶಾಲಾಶಿಕ್ಷಕ. 2021 ಮಾರ್ಚ್‌ನಲ್ಲಿ ನಿವೃತ್ತಿ. ಇಬ್ಬರು ಹೆಣ್ಣು ಮಕ್ಕಳು. ಹೆಂಡತಿ ಹೆಸರಿನಲ್ಲಿ₹ 15000, 3 ವರ್ಷಗಳ ಅವಧಿಗೆ RD ಮಾಡಿದ್ದೇನೆ. ತೆರಿಗೆ ಬಾರದಂತೆ ಮಾಡಲು ವಿಧಾನ ತಿಳಿಸಿ.

ಉತ್ತರ: ಹೆಣ್ಣು ಮಕ್ಕಳು ಪ್ರಾಪ್ತ ವಯಸ್ಕರಾದಲ್ಲಿ ಅವರ ಹೆಸರಿನಲ್ಲಿ₹ 15,000 ಆರ್.ಡಿ ಮಾಡಿ. ಈ ಮಾರ್ಗದಲ್ಲಿ ನಿಮಗೆ ತೆರಿಗೆ ಬರುವುದಿಲ್ಲ. ಅವರು ಅಪ್ರಾಪ್ತ ವಯಸ್ಕರಾದರೆ ಈ ಮಾರ್ಗ ಪ್ರಯೋಜನಕಾರಿಯಾಗಲಾರದು. ಏನೇ ಇರಲಿ ತೆರಿಗೆ ಬಿಟ್ಟು₹ 15000 ಆರ್.ಡಿ. ಮಾಡುವುದನ್ನು ನಿಲ್ಲಿಸಬೇಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT