ಸೋಮವಾರ, ಅಕ್ಟೋಬರ್ 14, 2019
28 °C

ವಾಣಿಜ್ಯ ವಾಹನ ಉದ್ಯಮದ ನಕಾರಾತ್ಮಕ ಬೆಳವಣಿಗೆ

Published:
Updated:
Commercial vehicle

ನವದೆಹಲಿ: ಮಂದಗತಿಯ ಆರ್ಥಿಕ ಬೆಳವಣಿಗೆ ಮತ್ತು ನಗದು ಬಿಕ್ಕಟ್ಟಿನಿಂದಾಗಿ ಪ್ರಸಕ್ತ ಹಣಕಾಸು ವರ್ಷದಲ್ಲಿ ವಾಣಿಜ್ಯ ವಾಹನಗಳ ಉದ್ಯಮವು ನಕಾರಾತ್ಮಕ  ಮಟ್ಟದಲ್ಲಿ ಇರಲಿದೆ ಎಂದು ಇನ್‌ವೆಸ್ಟ್‌ಮೆಂಟ್ ಇನ್‌ಫಾರ್ಮೇಷನ್‌ ಆ್ಯಂಡ್‌ ಕ್ರೆಡಿಟ್‌ ರೇಟಿಂಗ್‌ ಸಂಸ್ಥೆ (ಇಕ್ರಾ) ಹೇಳಿದೆ. 

‘ಬೇಡಿಕೆಗೆ ಸಂಬಂಧಿಸಿದ ಸಮಸ್ಯೆ ಮುಂದುವರಿಯಲಿದೆ. ವಿತರಕರಲ್ಲಿ ಮಾರಾಟವಾಗದೇ ಉಳಿದಿರುವ ವಾಹನಗಳ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿದೆ. ರಿಟೇಲ್‌ ಮಾರಾಟವೂ ನಿಧಾನವಾಗಿದೆ. ಬಿಎಸ್‌–6 ಜಾರಿಗೆ ಬರುತ್ತಿರುವುದು ಸಹ ಬಿಎಸ್‌–4 ವಾಹನಗಳ ಬೇಡಿಕೆಯಲ್ಲಿ ಇಳಿಕೆ ಕಾಣಲು ಕಾರಣವಾಗಿದೆ’ ಎಂದು ಇಕ್ರಾದ ಉಪಾಧ್ಯಕ್ಷ ಶಮ್‌ಷೇರ್ ದಿವಾನ್‌ ತಿಳಿಸಿದ್ದಾರೆ.

‘2018–19ರ ದ್ವಿತೀಯಾರ್ಧದಿಂದ ಮಾರಾಟ ಕುಸಿತ ಆರಂಭವಾಗಿದೆ. ಇದರಿಂದ 2019ರ ಏಪ್ರಿಲ್‌–ಆಗಸ್ಟ್‌ ಅವಧಿಯಲ್ಲಿ ಮಾರಾಟವು ಶೇ 19ರಷ್ಟು ಇಳಿಕೆಯಾಗಿದೆ. ಹಣಕಾಸು ವರ್ಷದಲ್ಲಿ ಇದುವರೆಗೆ ಶೇ 32ರಷ್ಟು ಇಳಿಕೆಯಾಗಿದೆ’ ಎಂದು ಅವರು ತಿಳಿಸಿದ್ದಾರೆ.

Post Comments (+)