ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಮುಖ ವಲಯಗಳಲ್ಲಿ ಶೇ 7.9ರಷ್ಟು ಬೆಳವಣಿಗೆ

Last Updated 31 ಅಕ್ಟೋಬರ್ 2022, 15:47 IST
ಅಕ್ಷರ ಗಾತ್ರ

ನವದೆಹಲಿ: ಎಂಟು ಮೂಲಸೌಕರ್ಯ ವಲಯಗಳು ಸೆಪ್ಟೆಂಬರ್‌ನಲ್ಲಿ ಶೇಕಡ 7.9ರಷ್ಟು ಬೆಳವಣಿಗೆ ಸಾಧಿಸಿವೆ. ಇದು ಮೂರು ತಿಂಗಳ ಗರಿಷ್ಠ ಪ್ರಮಾಣ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಈ ವಲಯಗಳಲ್ಲಿ ಶೇ 5.4ರಷ್ಟು ಬೆಳವಣಿಗೆ ಆಗಿತ್ತು.

ಆಗಸ್ಟ್‌ನಲ್ಲಿ ಬೆಳವಣಿಗೆಯು ಶೇ 4.1ರಷ್ಟು ಇತ್ತು. ಜೂನ್‌ ತಿಂಗಳಲ್ಲಿ ಬೆಳವಣಿಗೆ ಪ್ರಮಾಣವು ಶೇ 13.1ರಷ್ಟು ಆಗಿತ್ತು.

ಪ್ರಸಕ್ತ ಹಣಕಾಸು ವರ್ಷದ ಮೊದಲ ಆರು ತಿಂಗಳಲ್ಲಿ (ಏಪ್ರಿಲ್‌ನಿಂದ ಸೆಪ್ಟೆಂಬರ್‌ವರೆಗೆ) ಕಲ್ಲಿದ್ದಲು, ಕಚ್ಚಾ ತೈಲ, ನೈಸರ್ಗಿಕ ಅನಿಲ, ಸಂಸ್ಕರಣಾ ಉತ್ಪನ್ನಗಳು, ರಸಗೊಬ್ಬರ, ಉಕ್ಕು, ಸಿಮೆಂಟ್ ಮತ್ತು ವಿದ್ಯುತ್ ವಲಯಗಳ ಬೆಳವಣಿಗೆ ಪ್ರಮಾಣ ಶೇ 9.6ರಷ್ಟು ಆಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಶೇ 16.9ರಷ್ಟು ಬೆಳವಣಿಗೆ ದಾಖಲಾಗಿತ್ತು.

‘ಪ್ರಮುಖ ಕೈಗಾರಿಕಾ ವಲಯಗಳ ಶಕ್ತಿಯ ಕಾರಣದಿಂದಾಗಿಯೇ ಭಾರತವನ್ನು ಜಾಗತಿಕ ಮಟ್ಟದಲ್ಲಿ ಪ್ರಕಾಶಮಾನವಾಗಿ ಹೊಳೆಯುತ್ತಿರುವ ತಾಣ ಎಂದು ಗುರುತಿಸಲಾಗುತ್ತಿದೆ’ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್ ಗೋಯಲ್ ಟ್ವೀಟ್ ಮಾಡಿದ್ದಾರೆ.

ಬೆಳವಣಿಗೆ ಪ್ರಮಾಣದ ಕುರಿತು ಪ್ರತಿಕ್ರಿಯೆ ನೀಡಿರುವ ಐಸಿಆರ್‌ಎ ಸಂಸ್ಥೆಯ ಮುಖ್ಯ ಅರ್ಥಶಾಸ್ತ್ರಜ್ಞೆ ಅದಿತಿ ನಾಯರ್ ‘ಎರಡು ತಿಂಗಳ ಕಾಲ ಮಂದಗತಿಯಲ್ಲಿದ್ದ ಬೆಳವಣಿಗೆ ಪ್ರಮಾಣವು ಸೆಪ್ಟೆಂಬರ್‌ನಲ್ಲಿ ಪುಟಿದೆದ್ದಿದೆ. ಇದರಿಂದಾಗಿ, ಕೈಗರಿಕಾ ಉತ್ಪಾದನೆಯ ಸೂಚ್ಯಂಕವು ಶೇ 4ರಿಂದ ಶೇ 6ರ ಮಟ್ಟಕ್ಕೆ ಬೆಳವಣಿಗೆ ಕಾಣುವ ನಿರೀಕ್ಷೆ ಇದೆ’ ಎಂದು ಹೇಳಿದ್ದಾರೆ.

=

ವಲಯ;ಬೆಳವಣಿಗೆ (%)

ಕಲ್ಲಿದ್ದಲು;12

ರಸಗೊಬ್ಬರ;11.8

ಸಿಮೆಂಟ್;12.1

ವಿದ್ಯುತ್;11

ಸಂಸ್ಕರಣಾ ಉತ್ಪನ್ನಗಳು;6.6

ಕಚ್ಚಾ ತೈಲ;–2.3

ನೈಸರ್ಗಿಕ ಅನಿಲ;–1.7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT