ಮಂಗಳವಾರ, ಏಪ್ರಿಲ್ 7, 2020
19 °C

ವಾಹನ ಉದ್ಯಮಕ್ಕೆ ಕಾದಿರುವ ಸಂಕಷ್ಟದ ದಿನಗಳು

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಕೊರೊನಾ–2 ವೈರಸ್‌ ವ್ಯಾಪಕವಾಗಿ ಹಬ್ಬುತ್ತಿರುವುದರಿಂದ ದೇಶಿ ವಾಹನ ತಯಾರಿಕೆ ಮೇಲಿನ ಪ್ರತಿಕೂಲ ಪರಿಣಾಮವು ಇನ್ನೂ ಕೆಲ ಕಾಲ ಮುಂದುವರೆಯಲಿದೆ ಎಂದು ಇಂಡಿಯಾ ರೇಟಿಂಗ್‌ ಆ್ಯಂಡ್‌ ರಿಸರ್ಚ್‌ (ಇಂಡ್‌–ರೇ) ಅಂದಾಜಿಸಿದೆ.

ಕೊರಾನಾ ಪಿಡುಗಿನ ಕೇಂದ್ರ ಸ್ಥಾನವಾಗಿರುವ ಚೀನಾದ ವುಹಾನ್‌ ನಗರವು ವಾಹನ ಮತ್ತು ಬಿಡಿಭಾಗಗಳನ್ನು ತಯಾರಿಸುವ ಪ್ರಮುಖ ನೆಲೆಯಾಗಿದ್ದು ಸದ್ಯಕ್ಕೆ ಅಲ್ಲಿನ ಕೈಗಾರಿಕಾ ಚಟುವಟಿಕೆಗಳೆಲ್ಲ ಸ್ಥಗಿತಗೊಂಡಿವೆ.

ವೈರಸ್‌ ಪಿಡುಗು ಹಬ್ಬುತ್ತಿರುವುದು ಇದೇ ಬಗೆಯಲ್ಲಿ ಇನ್ನೂ ಎರಡು ತಿಂಗಳು ಮುಂದುವರೆದರೆ ದೇಶಿ ವಾಹನ ಉದ್ದಿಮೆಯು ಬರೀ ಪೂರೈಕೆ ಸಮಸ್ಯೆಯಷ್ಟೇ ಅಲ್ಲದೇ, ಬೇಡಿಕೆ ಹಾಗೂ ರಫ್ತು ಕುಸಿತದ ಪ್ರತಿಕೂಲತೆಯನ್ನೂ ಎದುರಿಸಬೇಕಾಗುತ್ತದೆ.

ವಾಹನ ತಯಾರಿಕೆಯ  ಮತ್ತು ಪೂರಕ ಉದ್ದಿಮೆಗಳು ಶೇ 27ರಷ್ಟು ಪ್ರಮುಖ ಬಿಡಿಭಾಗಗಳ ಅಗತ್ಯಗಳಿಗಾಗಿ  ಚೀನಾವನ್ನೇ ನೆಚ್ಚಿಕೊಂಡಿವೆ. ಬಿಡಿಭಾಗ ಪೂರೈಕೆಯಲ್ಲಿನ ಕೊರತೆಯು ಈ ವಹಿವಾಟಿನಲ್ಲಿ ತೊಡಗಿರುವ ಉದ್ದಿಮೆಗಳ ಹಣಕಾಸು ಪರಿಸ್ಥಿತಿಯನ್ನು ಬಿಗಡಾಯಿಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು