ಕಾರ್ಪೊರೇಷನ್‌ ಬ್ಯಾಂಕ್‌ಗೆ ಮೊದಲ ತ್ರೈಮಾಸಿಕದಲ್ಲಿ ₹ 85 ಕೋಟಿ ನಿವ್ವಳ ಲಾಭ

7

ಕಾರ್ಪೊರೇಷನ್‌ ಬ್ಯಾಂಕ್‌ಗೆ ಮೊದಲ ತ್ರೈಮಾಸಿಕದಲ್ಲಿ ₹ 85 ಕೋಟಿ ನಿವ್ವಳ ಲಾಭ

Published:
Updated:

ಮಂಗಳೂರು: ಕಾರ್ಪೊರೇಷನ್‌ ಬ್ಯಾಂಕ್‌ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ₹ 85 ಕೋಟಿ ನಿವ್ವಳ ಲಾಭ ಗಳಿಸಿದೆ.

ಕಳೆದ ವರ್ಷದ ಇದೇ ಅವಧಿಯಲ್ಲಿ ₹ 60 ಕೋಟಿ ನಿವ್ವಳ ಲಾಭ ಗಳಿಸಿತ್ತು. ಸಾಲ ವಸೂಲಾತಿಯಲ್ಲಿ ಭಾರಿ ಪ್ರಗತಿ ಸಾಧಿಸಿರುವುದರಿಂದ ಈ ಬಾರಿ ನಿವ್ವಳ ಲಾಭದಲ್ಲಿ ಏರಿಕೆ ಕಂಡುಬಂದಿದೆ ಎಂದು ಶನಿವಾರ ಇಲ್ಲಿ ಬಿಡುಗಡೆ ಮಾಡಲಾದ ಬ್ಯಾಂಕ್‌ನ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಮೂರು ತಿಂಗಳಲ್ಲಿ ಬ್ಯಾಂಕ್‌ನ ವಹಿವಾಟು ₹ 2,92,828 ಕೋಟಿಗಳು. ಇದರಲ್ಲಿ ಠೇವಣಿ ₹ 1.76 ಲಕ್ಷ ಕೋಟಿ ಹಾಗೂ ಮುಂಗಡ ₹ 1.16 ಲಕ್ಷ ಕೋಟಿಯಾಗಿದೆ. ಒಟ್ಟಾರೆ ವರಮಾನ ₹ 4,978 ಕೋಟಿಯಾಗಿದೆ. ಬ್ಯಾಂಕ್‌ನ ನಿವ್ವಳ ಎನ್‌ಪಿಎ ಶೇ 11.46ರಷ್ಟಿದೆ.

ಹಿಂದಿನ ಹಣಕಾಸು ವರ್ಷದಲ್ಲಿ ₹ 1,838 ಕೋಟಿಗಳ ನಿವ್ವಳ ನಷ್ಟ ಅನುಭವಿಸಿತ್ತು. 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 1

  Sad
 • 0

  Frustrated
 • 1

  Angry

Comments:

0 comments

Write the first review for this !