ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರ್‌ ಇಂಡಿಯಾದ ವೇತನ ರಹಿತ ಕಡ್ಡಾಯ ರಜೆ: ಪುರಿ ಸಮರ್ಥನೆ

Last Updated 16 ಜುಲೈ 2020, 14:32 IST
ಅಕ್ಷರ ಗಾತ್ರ

ನವದೆಹಲಿ: ಏರ್‌ ಇಂಡಿಯಾದಲ್ಲಿ ವೆಚ್ಚ ಕಡಿತ ಅನಿವಾರ್ಯ ಎಂದು ಹೇಳುವ ಮೂಲಕ ಕೆಲ ಸಿಬ್ಬಂದಿಗೆ ವೇತನ ರಹಿತ ಕಡ್ಡಾಯ ರಜೆ ನೀಡುವ ಸಂಸ್ಥೆಯ ನಿರ್ಧಾರವನ್ನು ನಾಗರಿಕ ವಿಮಾನಯಾನ ಸಚಿವ ಹರ್‌ದೀಪ್‌ ಸಿಂಗ್‌ ಪುರಿ ಸಮರ್ಥಿಸಿಕೊಂಡಿದ್ದಾರೆ.

‘ಪ್ರತಿ ವರ್ಷವೂ ಷೇರು ಮಾರಾಟ ಮಾಡುವ ಮೂಲಕ ₹ 500 ಕೋಟಿ ಅಥವಾ ₹ 600 ಕೋಟಿ ಹೂಡಿಕೆ ಮಾಡುವುದು ಸಮರ್ಥನೀಯವಲ್ಲ’ ಎಂದಿದ್ದಾರೆ.

‘ವೇತನ ರಹಿತ ರಜೆ ಯೋಜನೆಯು ಕಾರ್ಮಿಕ ಕಾಯ್ದೆಯ ಉಲ್ಲಂಘನೆಯಾಗಿದ್ದು, ಉನ್ನತಾಧಿಕಾರಿಗಳನ್ನು ರಕ್ಷಿಸಲು ಬೇರೆ ಸಿಬ್ಬಂದಿಯನ್ನು ಬಲಿಕೊಡಲಾಗುತ್ತಿದೆ’ ಎಂದು ಟಿಎಂಸಿ ಸಂಸದ ಡರೆಕ್ ಒ ಬ್ರಯಾನ್ ಟೀಕೆಗೆ ಸಚಿವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ.

‘ಏರ್ ಇಂಡಿಯಾ ಸಂಸ್ಥೆಯು ಸರ್ಕಾರದಿಂದ ನೆರವು ಬಯಸಿದರೆ, ಅದನ್ನು ನೀಡಲು ಸದ್ಯಕ್ಕಂತೂ ಸಾಧ್ಯವಿಲ್ಲ. ಕೋವಿಡ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಸಮಾಜದ ಬೇರೆ ಬೇರೆ ವರ್ಗಗಳಿಗೆ ಪರಿಹಾರ ನೀಡುವ ಬೇಡಿಕೆಯನ್ನು ಪೂರೈಸಬೇಕಿದೆ’ ಎಂದು ಹೇಳುವ ಮೂಲಕ ಸರ್ಕಾರದಿಂದ ನೆರವು ಸಿಗುವುದಿಲ್ಲ ಎನ್ನುವುದನ್ನೂ ಅವರು ತಿಳಿಸಿದ್ದಾರೆ.

ಅಂಕಿ–ಅಂಶ

₹ 70 ಸಾವಿರ ಕೋಟಿ:ಏರ್ ಇಂಡಿಯಾದ ಒಟ್ಟು ನಷ್ಟ

₹ 8,500 ಕೋಟಿ: 2018–19ರಲ್ಲಿ ಸಂಸ್ಥೆಯ ನಷ್ಟ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT