ಶನಿವಾರ, ಜೂನ್ 25, 2022
27 °C

ಕೋವಿಡ್ ಎರಡನೇ ಅಲೆಯಿಂದ 1 ಕೋಟಿ ಉದ್ಯೋಗ ನಷ್ಟ: ಸಿಎಂಐಇ

ಪಿಟಿಐ Updated:

ಅಕ್ಷರ ಗಾತ್ರ : | |

ಮುಂಬೈ: ಕೋವಿಡ್–19 ಸೋಂಕಿನ ಎರಡನೇ ಅಲೆಯಿಂದಾಗಿ ಭಾರತದಲ್ಲಿ ಒಂದು ಕೋಟಿ ಮಂದಿ ಉದ್ಯೋಗ ಕಳೆದುಕೊಂಡಿದ್ದಾರೆ. ಶೇ 97ರಷ್ಟು ಕುಟುಂಬಗಳ ಆದಾಯ ಕಡಿಮೆಯಾಗಿದೆ ಎಂದು ‘ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಎಕಾನಮಿ (ಸಿಎಂಐಇ) ಚಿಂತಕರ ಚಾವಡಿಯ ಮುಖ್ಯ ಕಾರ್ಯನಿರ್ವಾಹಕ ಮಹೇಶ್ ವ್ಯಾಸ್ ಹೇಳಿದ್ದಾರೆ.

ಸಿಎಂಐಇ ಲೆಕ್ಕಾಚಾರ ಹಾಕಿರುವ ಪ್ರಕಾರ ಏಪ್ರಿಲ್‌ನಲ್ಲಿ ಶೇ 8ರಷ್ಟಿದ್ದ ನಿರುದ್ಯೋಗ ದರ ಮೇ ಅಂತ್ಯದ ವೇಳೆಗೆ ಶೇ 12ಕ್ಕೆ ಬಂದಿರುವ ಸಾಧ್ಯತೆ ಇದೆ ಎಂದು ವ್ಯಾಸ್ ಹೇಳಿದ್ದಾರೆ.

ಓದಿ: 

ಉದ್ಯೋಗ ನಷ್ಟಕ್ಕೆ ಮುಖ್ಯ ಕಾರಣ ಕೋವಿಡ್ ಎರಡನೇ ಅಲೆ. ಆರ್ಥಿಕತೆಯು ಮರಳಿ ತೆರೆದಾಗ ಸಮಸ್ಯೆಯ ಒಂದು ಭಾಗ ಪರಿಹಾರವಾಗಲಿದೆ. ಆದರೆ ಸಂಪೂರ್ಣವಾಗಿ ಬಗೆಹರಿಯದು ಎಂದು ಅವರು ಹೇಳಿದ್ದಾರೆ.

ಒಮ್ಮೆ ಉದ್ಯೋಗ ಕಳೆದುಕೊಂಡವರಿಗೆ ಮತ್ತೆ ಪಡೆಯುವುದು ಕಷ್ಟಕರವಾಗಿ ಪರಿಣಮಿಸಿದೆ. ಅನೌಪಚಾರಿಕ ವಲಯದಲ್ಲಿ ಉದ್ಯೋಗ ಕಳೆದುಕೊಂಡವರಿಗೆ ಬೇಗನೆ ಮರಳಿ ಪಡೆಯಲು ಸಾಧ್ಯವಾಗುತ್ತದೆ. ಆದರ, ಔಪಚಾರಿಕ ವಲಯ ಮತ್ತು ಉತ್ತಮ ಗುಣಮಟ್ಟದ ಕೆಲಸ ಕಳೆದುಕೊಂಡವರಿಗೆ ಮರಳಿ ಪಡೆಯಲು ವರ್ಷವಾದರೂ ಬೇಕಾಗುತ್ತದೆ ಎಂದು ಅವರು ಹೇಳಿದ್ದಾರೆ.

ಓದಿ: 

2020ರ ಮೇ ವೇಳೆಗೆ ದೇಶದ ನಿರುದ್ಯೋಗ ಪ್ರಮಾಣ ದಾಖಲೆ ಮಟ್ಟ ತಲುಪಿತ್ತು. ಕೋವಿಡ್ ಎರಡನೇ ಅಲೆಯು ಇದನ್ನು ಮತ್ತಷ್ಟು ಹೆಚ್ಚಿಸಿತು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು