ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡೆಕ್ಕನ್‌ ಅರ್ಬನ್‌ ಬ್ಯಾಂಕ್‌ ವಹಿವಾಟಿಗೆ ನಿರ್ಬಂಧ

Last Updated 19 ಫೆಬ್ರುವರಿ 2021, 21:53 IST
ಅಕ್ಷರ ಗಾತ್ರ

ಮುಂಬೈ: ಕರ್ನಾಟಕ ಮೂಲದ ಡೆಕ್ಕನ್‌ ಅರ್ಬನ್‌ ಕೋ–ಆಪರೇಟಿವ್‌ ಬ್ಯಾಂಕ್‌ ಹೊಸದಾಗಿ ಸಾಲ ನೀಡುವುದು ಅಥವಾ ಠೇವಣಿಗಳನ್ನು ಸ್ವೀಕರಿಸುವುದಕ್ಕೆ ಭಾರತೀಯ ರಿಸರ್ವ್‌ ಬ್ಯಾಂಕ್‌ ನಿರ್ಬಂಧ ವಿಧಿಸಿದೆ.

ಆರು ತಿಂಗಳ ಕಾಲ ಉಳಿತಾಯ ಖಾತೆಯಿಂದ ಗ್ರಾಹಕರು ₹1,000ಕ್ಕಿಂತ ಹೆಚ್ಚು ಹಣವನ್ನು ಪಡೆಯದಂತೆ ಸೂಚಿಸಲಾಗಿದೆ. ಪರವಾನಗಿ ಇಲ್ಲದೆಯೇ ಬ್ಯಾಂಕ್‌ ಹೊಸದಾಗಿ ಯಾವದೇ ರೀತಿ ಹೂಡಿಕೆಗಳನ್ನು ಮಾಡುವಂತಿಲ್ಲ ಎಂದು ನಿರ್ದೇಶನ ನೀಡಲಾಗಿದೆ.

ಹಣಕಾಸು ಪರಿಸ್ಥಿತಿ ಸುಧಾರಿಸುವವರೆಗೆ ಈ ಕ್ರಮಗಳು ಮುಂದುವರಿಯಲಿವೆ. ಈ ನಿರ್ಬಂಧಗಳ ನಡುವೆಯೂ ಬ್ಯಾಂಕ್‌ ಎಂದಿನಂತೆ ವಹಿವಾಟು ನಡೆಸಬಹುದು. ಮುಂದಿನ ಪರಿಸ್ಥಿತಿಗಳನ್ನು ಪರಿಶೀಲಿಸಿ ಈ ನಿರ್ಬಂಧಗಳನ್ನು ಮಾರ್ಪಾಡು ಮಾಡಬಹುದು ಎಂದು ಆರ್‌ಬಿಐ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT